Thursday, September 19, 2024

ಭೋಜನಪ್ರಿಯ ದರ್ಶನ್.. ದಾಸನ ಇಷ್ಟದ ಫುಡ್ ಏನೇನು ಗೊತ್ತಾ..?

ಫಿಲ್ಮಿ ಡೆಸ್ಕ್​: ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರೋ ದರ್ಶನ್ ಜೈಲೂಟ ಸೆಟ್ ಆಗದೇ ಪರದಾಡ್ತಾ ಇದ್ದಾರೆ ಇತ್ತೀಚಿಗೆ ತನಗೆ ಮನೆಯೂಟ ತರಿಸಿಕೊಳ್ಳಲು ಅವಕಾಶ ಕೊಡಿ ಅಂತ ಹೈಕೋರ್ಟ್​​ಗೆ ರಿಟ್ ಅರ್ಜಿ ಕೂಡ ಸಲ್ಲಿಸಿದ್ರು. ಆದ್ರೆ ಅದಕ್ಕೆ ಅವಕಾಶ ಕೊಡದ ಕೋರ್ಟ್ ಇದೇ 18ಕ್ಕೆ ವಿಚಾರಣೆಯನ್ನ ಮುಂದೂಡಿದೆ.

ಅಸಲಿಗೆ ದರ್ಶನ್ ಮಹಾನ್ ಭೋಜನ ಪ್ರಿಯ, ಅದ್ರಲ್ಲೂ ಮಾಂಸದೂಟ ಅಂದ್ರೆ ದರ್ಶನ್​ಗೆ ಪಂಚಪ್ರಾಣ. ಬಿರ್ಯಾನಿ ಅಂದ್ರೆ ದರ್ಶನ್​ಗೆ ಅಚ್ಚುಮೆಚ್ಚು. ಕಲಾಸಿಪಾಳ್ಯದ ಚಾಕ್ಣ ಕೂಡ ಅವರ ಫೆವರೀಟ್. ಅನುದಿನವೂ ನಾಲ್ಕೈದು ವೆರೈಟಿ ನಾನ್ ವೆಜ್ ಐಟಂಗಳನ್ನ ಇಷ್ಟಪಟ್ಟು ತಿಂತಾ ಇದ್ರು ದರ್ಶನ್.

ಸದ್ಯ ಡೆವಿಲ್ ಸಿನಿಮಾಗಾಗಿ ವರ್ಕೌಟ್ ಮಾಡ್ತಾ ಡಯಟ್ ಫಾಲೋ ಮಾಡ್ತಾ ಇದ್ದ ದರ್ಶನ್ ತಮ್ಮ ಅನಿಮಿಯಿತ ಫುಡ್ ಹ್ಯಾಬಿಟ್ಸ್​​ನ ಕೊಂಚ ಬದಲಿಸಿಕೊಂಡಿದ್ರಂತೆ. ಜೈಲಿಗೆ ಹೋಗುವ ಮುನ್ನ ದರ್ಶನ್​ ಫುಡ್ ಮೆನ್ಯೂ ಹೇಗಿತ್ತು ಅನ್ನೋದನ್ನ ನೋಡೋದಾದ್ರೆ

ಇದನ್ನೂ ಓದಿ: ನಟ ದರ್ಶನ್​ ಜೈಲು ಸೇರಿ ಇಂದಿಗೆ ಒಂದು ತಿಂಗಳು!

ಬೆಳಗಿನ ತಿಂಡಿಗೆ ಇಡ್ಲಿ-ವಡೆ, ಪೊಂಗಲ್ ಉಪ್ಪಿಟ್ಟು ತಿನ್ನುತ್ತಿದ್ದರು. ಅಕ್ಕಿ ನುಚ್ಚಿನ ಉಪ್ಪಿಟ್ಟು ಅವರ ಫೇವರೇಟ್. ಕೆಲವೊಮ್ಮೆ ತಾವೆ ಇಷ್ಟಪಟ್ಟು ಉಪ್ಪಿಟ್ಟು ಮಾಡುತ್ತಿದ್ರಂತೆ ದರ್ಶನ್. ತಿಂಡಿ ನಂತರ ಆಗಾಗ ವಾಟರ್ ಮೆಲನ್ ಜ್ಯೂಸ್ ಕೂಡಾ ಕುಡಿಯುತ್ತಿದ್ದರು.

ದಾಳಿಂಬೆ ಜ್ಯೂಸ್ ಸಹ ಕುಡಿಯುತ್ತಿದ್ದ ದರ್ಶನ್ ಮಧ್ಯಾಹ್ನ ಬ್ರೆಸ್ಟ್ ಚಿಕನ್ ಜೊತೆ ಅನ್ನ ಅಥವಾ ಚಪಾತಿ ತಿನ್ನುತ್ತಿದ್ದರು. ಡಯಟ್ ನಲ್ಲಿದ್ದ ಕಾರಣ ಆಯಿಲ್ ಲೆಸ್ ಚಿಕನ್ ತಿಂತಾ ಇದ್ರು. ನೀರಲ್ಲಿ ಬೇಯಿಸಿದ ಎಣ್ಣೆ, ಮಸಾಲೆ ಬಳಸದ ಚಿಕನ್ ತಿಂತಾ ಇದ್ರಂತೆ.

ಊಟ ಆದ ಕೆಲವು ಗಂಟೆಗಳ ನಂತರ ಗ್ರೀನ್ ಟೀ ಸೇವನೆ ಮಾಡ್ತಾ ಇದ್ರು  ರಾತ್ರಿ ಬೇಯಿಸಿರೋ ಮೀನು ಸೇವಿಸುತ್ತಿದ್ದರು. ಜೊತೆಗೆ ಒಂದು ಹಿಡಿ ಅನ್ನಕ್ಕೆ ತುಪ್ಪ ಬೆರೆಸಿ ಅಷ್ಟರಲ್ಲಿ ಊಟ ಮುಗಿಸ್ತಾ ಇದ್ರಂತೆ.

ಡೆವಿಲ್ ಗಾಗಿ ಡಯಟ್ ಇದ್ದ ಕಾರಣ ಮಸಾಲೆ ಪದಾರ್ಥಗಳಿಗೆ  ದರ್ಶನ್ ಗುಡ್ ಬೈ ಹೇಳಿದ್ರು. ವಾರದಲ್ಲಿ ಎಂದಾದರೂ ಒಮ್ಮೆ ನಟ ಚೆನ್ನಾಗಿ ನಾನ್ ವೆಜ್ ತಿನ್ನುತ್ತಿದ್ದರು. ಅವರ ನೆಚ್ಚಿನ ನಾನ್ ವೆಜ್ ನಾಟಿ ಕೋಳಿ ಸಾರು. ದೋಸೆ ಜೊತೆ ಕೈಮಾ ಗೊಜ್ಜು ಅಂದ್ರೆ ಸಖತ್ ಇಷ್ಟ ಪಡುತ್ತಿದ್ದರು.

ದಾಸನ ಮೆನುವಿನಲ್ಲಿ ಪ್ರತಿದಿನ ನಾನ್ ವೆಜ್ ಇರಲೇಬೇಕಿತ್ತು. ವರ್ಷದಲ್ಲಿ ಏಳು ದಿನ ಮಾತ್ರ ನಾನ್ ವೆಜ್ ತಿನ್ನುತ್ತಲೇ ಇರಲಿಲ್ಲ. ಅಯ್ಯಪ್ಪ ಮಾಲೆ ಹಾಕಿಸಿದಾಗ ನಾನ್ ವೆಜ್ ಮುಟ್ಟುತ್ತಿರಲಿಲ್ಲ. ರಾಬರ್ಟ್ ನ ಹನುಮನ ವೇಷಕ್ಕಾಗಿ ಕೂಡಾ ದರ್ಶನ್ ನಾನ್ ವೆಜ್ ಬಿಟ್ಟಿದ್ದರು. ರಾಬರ್ಟ್ ಗಾಗಿ 12 ದಿನ ನಾನ್ ವೆಜ್ ಬಿಟ್ಟಿದ್ದರು.

ಇನ್ನೂ ಪಾರ್ಟಿ ಟೈಂನಲ್ಲಿ ನೋ ಡಯಟ್. ಯಥೇಚ್ಚವಾಗಿ ಗುಂಡು ತುಂಡು ಇರಲೇಬೇಕಿತ್ತು. ಶೂಟಿಂಗ್ ಟೈಂನಲ್ಲಿ ಡಯಟ್ ಮಾಡ್ತಾ ಇದ್ದ ದರ್ಶನ್ ಉಳಿದ ಸಮಯದಲ್ಲಿ ಪಬ್ಬು, ಪಾರ್ಟಿ ಅಂತ ಮೋಜಿನ ಜೀವನ ನಡೆಸ್ತಾ ಇದ್ದವರು. ದರ್ಶನ್​ಗೆ ಆತಿಥ್ಯ ಕೊಡೋದಕ್ಕೆ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು  ತುದಿಗಾಲಲ್ಲಿ ನಿಂತಿರ್ತಾ ಇದ್ರು. ದೊಡ್ಡ ದೊಡ್ಡ ಪಬ್ಬು, ಕ್ಲಬ್ಬಿನ ಓನರ್​ಗಳು ದರ್ಶನ್ ತಮ್ಮ ಜಾಗಕ್ಕೆ ಬಂದ್ರೆ ಗೌರವ ಅಂತ ಭಾವಿಸ್ತಾ ಇದ್ರು.

ಮಾಂಸಾಹಾರ ಪ್ರಿಯನಾದ ದರ್ಶನ್​ಗೆ ಸದಾ ಭಕ್ಷ ಭೋಜ್ಯಗಳ ಭೋಜನ ಸಿದ್ದವಾಗಿರ್ತಾ ಇತ್ತು. ಗುಂಡು, ತುಂಡುಗಳನ್ನ ಎಂಜಾಯ್ ಮಾಡ್ತಾ ಮೋಜಿನ ಜೀವನ ಮಾಡ್ತಿದ್ದ ದರ್ಶನ್​ಗೆ ಈಗ ಜೈಲಿನಲ್ಲಿ ಕೊಡೋ ಗ್ರಾಂ ಲೆಕ್ಕದ ಆಹಾರ ಒಂದು ಚೂರೂ ಇಷ್ಟವಾಗ್ತಾ ಇಲ್ಲವಂತೆ. ಚಿಕನ್, ಮಟನ್, ಮೊಟ್ಟೆ, ಹಣ್ಣು, ಡ್ರೈ ಪ್ರೂಟ್ಸ್ ಸೇವಿಸುತ್ತಿದ್ದ ದರ್ಶನ್​ಗೆ ಜೈಲಿನಲ್ಲಿ ಅನ್ನ ಸಾಂಬಾರ್, ಚಪಾತಿ, ಮುದ್ದೆ , ಮಜ್ಜಿಗೆ ಸಿಗುತ್ತಿದೆ. ವಾರಕ್ಕೊಮ್ಮೆ ಮೊಟ್ಟೆ ಚಿಕನ್ ಸಿಗುತ್ತಿದೆ ಅಷ್ಟೇ. ಅದು ಕೂಡ 180 ಗ್ರಾಂ ಚಿಕನ್ ವಿತರಣೆ ಮಾಡಲಾಗುತ್ತಿದೆ. ಈ ಗ್ರಾಂ ಲೆಕ್ಕದ ಊಟ ತಿಂದು ಕಂಗಾಲಾಗಿರೋ ದಾದ ಭರ್ತಿ 10 ಕೆಜಿ ತೂಕ ಕಳೆದುಕೊಂಡು ಬಡಕಲಾಗಿದ್ದಾರೆ.

ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES