Tuesday, September 17, 2024

ವಾಲ್ಮೀಕಿ ನಿಗಮ ಅಕ್ರಮದ ಸುಳಿಯಲ್ಲಿ ಶಾಸಕರ ಪಿಎ! ದದ್ದಲ್​ಗೂ ಸಂಕಷ್ಟನಾ?

₹187 ಕೋಟಿ ಅಕ್ರಮ ನಡೆದಿರುವ ವಾಲ್ಮೀಕಿ ನಿಗಮದ ಹಗರಣದಲ್ಲಿ ಈಗಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಅವರ ಪಿಎ ಹರೀಶ್​ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಶಾಸಕರೂ ಆಗಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ಅವರಿಗೂ ಆತಂಕ ಕಾಡುತ್ತಿದೆ. ಯಾಕೆಂದರೆ ಶಾಸಕರ ಪಿಎ ಪಂಪಣ್ಣ ಖಾತೆಗೂ ಎರಡು ಬಾರಿ ಹಣ ವರ್ಗಾವಣೆಯಾಗಿದೆ.

ಪಂಪಣ್ಣ ಖಾತೆಗೆ ಮೊದಲ ಬಾರಿ ಕೇವಲ ₹5 ಮಾತ್ರ ಸಂದಾಯವಾಗಿದೆ. ಆ ಬಳಿಕ 2ನೇ ಹಂತದಲ್ಲಿ ಒಂದೇ ಬಾರಿ ₹55 ಲಕ್ಷ ವರ್ಗಾವಣೆಯಾಗಿದೆ. ಈಗಾಗಲೇ ಒಟ್ಟಾರೆ ಹಣ ವರ್ಗಾವಣೆ ಬಗ್ಗೆ ತನಿಖೆಗೆ ಇಡಿ ಮುಂದಾಗಿದೆ. ಬುಧವಾರ ಬೆಳಗ್ಗೆಯೇ ನಾಗೇಂದ್ರ ಜೊತೆ ದದ್ದಲ್​ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಪಂಪಣ್ಣ ವಿಚಾರಣೆ ವೇಳೆ ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಹೋದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ: ಬಟ್ಟೆ ಹೊತ್ತೊಯ್ದ ಪೊಲೀಸರು

ಪಿಎ ಪಂಪಣ್ಣ ಇಡಿ ಅಧಿಕಾರಿಗಳ ಸುಳಿಯಲ್ಲಿ ಸಿಲುಕಿದರೆ ಶಾಸಕ ಬಸನಗೌಡ ದದ್ದಲ್​ ಸಹ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರಾ ಎಂಬುವುದೇ ಈಗಿರುವ ಆತಂಕ. ನಿಗಮದ ಎಂಡಿ ಪದ್ಮನಾಭ, ಅಕೌಂಟೆಂಟ್​ ಪರಶುರಾಮ್​ ಜೊತೆ ಮಾತನಾಡಿದ ವೇಳೆ ಅಧ್ಯಕ್ಷರ ಮಾಹಿತಿ ಸದ್ಯಕ್ಕೆ ನೀಡುವುದು ಬೇಡ ಎನ್ನಲಾಗಿದೆ. ಆ ಆಡಿಯೋ ಕೂಡ ಎಲ್ಲೆಡೆ ವೈರಲ್​ ಆಗಿದೆ. ಹಾಗಿದ್ರೆ ಪಿಎ ಖಾತೆಗೆ ಹಣ ಜಮೆಯಾಗಿರುವುದು ಯಾಕೆ? ಹಣ ಹಾಕಿದವರು ಯಾರು? ಯಾಕೆ ಹಣ ಹಾಕಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗಲಿವೆ. ಈ ಬಗ್ಗೆ ತನಿಖೆಯಲ್ಲಿ ಶಾಸಕರು ಸಹ ಸಿಲುಕುತ್ತಾರಾ ಅನ್ನೋದು ಸದ್ಯಕ್ಕೆ ಮಿಲಿಯನ್​ ಡಾಲರ್​ ಪ್ರಶ್ನೆ.

RELATED ARTICLES

Related Articles

TRENDING ARTICLES