Tuesday, September 17, 2024

ನಟ ಪ್ರಭುದೇವ ಅಜ್ಜಿ ನಿಧನ: ಮೈಸೂರಿನಲ್ಲಿ ಇಂದು ಅಂತ್ಯ ಕ್ರಿಯೆ

ಮೈಸೂರು: ಬಹುಭಾಷ ನಟ ಪ್ರಭುದೇವ ಅವರ ಅಜ್ಜಿ ಇಂದು ವಯೋಸಹಜ ನಿಧನ ಹೊಂದಿದ್ದಾರೆ. ಅಜ್ಜಿಯ ಅಂತಿಮ ದರ್ಶನಕ್ಕೆ ಮೊಮ್ಮಗ ಪ್ರಭುದೇವ ಹಾಗು ಸಹೋದರರು ಚನ್ನೈನಿಂದ ಮೈಸೂರಿನ ಅಜ್ಜಿ ನಿವಾಸಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ: ಗೃಹಸಚಿವರಿಂದ ಪ್ರಮಾಣ ಪತ್ರ ವಿತರಣೆ

ಪುಟ್ಟಮ್ಮಣ್ಣಿ (97), ಅವರು ವಯೋ ಸಹಜ ನಿಧನಹೊಂದಿದ್ದಾರೆ. ಪ್ರಭುದೇವ ಅವರ ತಾಯಿಯವರ ತಾಯಿ ಪುಟ್ಟಮ್ಮಣ್ಣಿ. ಇವರ ಅಂತ್ಯಕ್ರಿಯೆಯೂ ಮೈಸೂರಿನ ದೂರ ಗ್ರಾಮದಲ್ಲಿ ನಡೆಯಲಿದೆ. ಇಂದು ನಡೆಯಲಿರುವ ಅಂತ್ಯ ಕ್ರಿಯೆಗೆ ದೂರದೂರುಗಳಿಂದ ಕುಟುಂಬಸ್ಥರು ಹಾಗು ಸಂಬಂಧಿಕರು ಆಗಮಿಸುತ್ತಿದ್ದಾರೆ.

ಇದೇ ವೇಳೆ ಅಜ್ಜಿಯ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಚನ್ನೈನಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಭುದೇವ ಹಾಗು ಸಹೋದರರು ಆಗಮಿಸಿದ್ದಾರೆ.

RELATED ARTICLES

Related Articles

TRENDING ARTICLES