Tuesday, September 17, 2024

ಮೊಬೈಲ್​ ಚಾರ್ಜಿಂಗ್​ ಮಾಡುವಾಗ ವಿದ್ಯುತ್ ಶಾಕ್​: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬೆಂಗಳೂರು: ಮೊಬೈಲ್​ ಫೋನ್​ಗೆ ಚಾರ್ಜ್​ ಮಾಡುವ ವೇಳೆ ವಿದ್ಯುತ್​ ಶಾಕ್​ ತಗುಲಿ ವಿದ್ಯಾರ್ಥಿ ಸಾವಿಗೀಡಾಗಿರುವ ಘಟನೆ ಶುಕ್ರವಾರ ರಾತ್ರಿ ನಗರದ ಪಿಜಿಯೊಂದರಲ್ಲಿ ನಡೆದಿದೆ.

ಬೀದರ್​ ಮೂಲದ ಶ್ರೀನಿವಾಸ್​ (24) ಮೃತ ವಿದ್ಯಾರ್ಥಿ. ಬೆಂಗಳೂರಿನ ಮಂಜುನಾಥ ನಗರದ ಪಿಜಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬಾವಿಗೆ ಎಸೆದು 2 ತಿಂಗಳ ಹಸುಗೂಸು ಕೊಲೆ

ಸಾಫ್ಟ್​ವೇರ್​ ಕೋರ್ಸ್​ ಮಾಡಲು ಬೀದರ್​ನಿಂದ ಬೆಂಗಳೂರಿಗೆ ಬಂದಿದ್ದ ಶ್ರೀನಿವಾಸ್​, ಮಂಜುನಾಥ ನಗರದ ಪಿಜಿಯೊಂದರಲ್ಲಿ ನೆಲೆಸಿದ್ದ, ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮೊಬೈಲ್​ಗೆ ಚಾರ್ಜ್​ ಮಾಡಲು ಮುಂದಾಗಿದ್ದ. ಈ ವೇಳೆ ಸ್ವಿಚ್​ ಬೋರ್ಡ್​ ಹಾಗು ಚಾರ್ಜಿಂಗ್​ ವೈಯರ್​ ನಿಂದ ವಿದ್ಯುತ್​ ಶಾಕ್ ತಗುಲಿದೆ. ಈ ಚಾರ್ಜರ್​ ಅದಾಗಲೇ ಡ್ಯಾಮೇಜ್​ ಆಗಿತ್ತು ಎಂದು ತಿಳಿದು ಬಂದಿದೆ. ವಿದ್ಯತ್​ ಶಾಕ್​ನಿಂದ ವಿದ್ಯಾರ್ಥಿ ಸ್ಥಳದಲ್ಲೇ ಅಂಗಾತ ಬಿದ್ದಾನೆ. ಈ ವೇಳೆ ಪಕ್ಕದ ಬೆಡ್​ ಯುವಕ ಊಟಕ್ಕೆ ಕರೆಯಲು ಶ್ರೀನಿವಾಸ್​ನನ್ನು ಮುಟ್ಟಿದಾಗ ಆತನಿಗೂ ವಿದ್ಯುತ್ ಶಾಕ್​ ತಗುಲಿದೆ, ಅದೃಷ್ಟ ವಶಾತ್​ ಯುವಕ ಪಾರಾಗಿದ್ದಾನೆ.

ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಪಿಜಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗು ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES