Tuesday, September 17, 2024

ಕನ್ನಡಿಗರ ಉದ್ಯೋಗಕ್ಕಾಗಿ ಜುಲೈ 1ರಂದು ರಾಜ್ಯಾದ್ಯಂತ ಕರವೇ ಬೃಹತ್ ಪ್ರತಿಭಟನೆ

ಬೆಂಗಳೂರು: ಕನ್ನಡಿಗರ ಉದ್ಯೋಗಕ್ಕಾಗಿ ಕರವೇ ಬೃಹತ್ ಹೋರಾಟದ ಕರೆ ಕೊಟ್ಟಿದೆ. ಜುಲೈ 1ರಂದು ರಾಜ್ಯಾದ್ಯಂತ ಡಿಸಿ ಕಚೇರಿಗಳು ಮುಂದೆ ಧರಣಿ ನಡೆಸಲು ಕರವೇ ತೀರ್ಮಾನ ಮಾಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿದ್ದೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಕರವೇ ಆಗ್ರಹಿಸಿದೆ.

ಇದನ್ನೂ ಓದಿ: ಸತ್ಯವಾಯ್ತು ಕಾಲಜ್ಞಾನ ಭವಿಷ್ಯ: YES Bank ನ 500 ಉದ್ಯೋಗಿಗಳು ವಜಾ

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಬೇಕು. ಕನ್ನಡಿಗರನ್ನ ಬಹುರಾಷ್ಟ್ರೀಯ ಕಂಪನಿಗಳು ಕಡೆಗಣಿಸುತ್ತಿವೆ. ಉದ್ಯಮ‌ ನಡೆಸಲು ಕರ್ನಾಟಕ ಬೇಕು ಆದ್ರೆ ಕೆಲಸಕ್ಕೆ ಕನ್ನಡಿಗರು ಬೇಡ. ಉದ್ಯೋಗ ಮೀಸಲಾತಿ ಇಲ್ಲದೇ ಕನ್ನಡಿಗರಿಗೆ ಬಹುದೊಡ್ಡ ಅನ್ಯಾಯವಾಗ್ತಿದೆ ಕನ್ನಡಿಗರ ಹಿತ ಕಾಪಾಡುವಲ್ಲಿ ಯಾವ ಸರ್ಕಾರಗಳು ಮುಂದಾಗಿಲ್ಲ. ಕನ್ನಡಿಗರ ಹಿತಾಸಕ್ತಿ ಕಾಪಾಡಲು ಕಾನೂನು ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES