Tuesday, September 17, 2024

POCSO ಪ್ರಕರಣ: ಯಡಿಯೂರಪ್ಪ ಬಂಧನಕ್ಕೆ ವಾರೆಂಟ್​ ಜಾರಿ ಮಾಡಿದ ಕೋರ್ಟ್​

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಹಾಗು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತೆ ಸಂಕಷ್ಟ ಎದುರಾಗಿದ್ದು POCSO ಪ್ರಕಣದಲ್ಲಿ ಬಿಎಸ್​ವೈ ಬಂಧನಕ್ಕೆ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿ ನ್ಯಾಯಾಲಯ ಆದೇಶ ಮಾಡಿದೆ. ಯಾವುದೇ ಸಮಯದಲ್ಲೂ ಬಿಎಸ್​ವೈ ಬಂಧನವಾಗಲಿದೆ.

ದಿಢೀರ್‌ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರಿಗೆ ಸಿಐಡಿ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿ 1ನೇ ತ್ವರಿತಗತಿಯ ನ್ಯಾಯಾಲಯವು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬಿಎಸ್‌ವೈ ಸೇರಿ 53 ಮಂದಿ ವಿರುದ್ಧ ದೂರು!: ಇದು ರಾಜಕೀಯ ಪ್ರೇರಿತವೇ?

81 ವರ್ಷದ ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳೆ ಇತ್ತೀಚೆಗೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಈ ಮಹಿಳೆ ಬೆಂಗಳೂರಿನ ಹುಳಿಮಾವಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಯಡಿಯೂರಪ್ಪ ಅಷ್ಟೇ ಅಲ್ಲದೇ ಈ ಹಿಂದೆ ಹಿರಿಯ ರಾಜಕಾರಣಿ ಹಾಗೂ IPS ಅಧಿಕಾರಿ ಸೇರಿ 53 ಮಂದಿ ವಿರುದ್ಧ ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಇಲ್ಲಿಗೆ ಈ ಪ್ರಕರಣ ಕ್ಲೋಸ್‌ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಅವರ ಬಂಧನಕ್ಕೆ ಸಿದ್ದತೆ ನಡೆದಿದೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES