Thursday, September 19, 2024

T20 Worldcup 2024: ಭಾರತಕ್ಕೆ ಪಾಕ್​ ವಿರುದ್ದ ಭರ್ಜರಿ ಜಯ

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಎರಡನೇ ವಿಜಯ ದಾಖಲಿದೆ.

ಭಾರತ ತಂಡಕ್ಕೆ ಈ ವಿಜಯದಿಂದ ಭಾರೀ ವಿಶ್ವಾಸ ಹೆಚ್ಚಾಗಿದೆ. ಇದು ಭಾರತ ತಂಡಕ್ಕೆ ಟಿ20 ವಿಶ್ವ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ದೊರೆಯುತ್ತಿರುವ 8ನೇ ವಿಜಯವಾಗಿದ್ದು, ಪಾಕಿಸ್ತಾನ ಒಂದು ಬಾರಿ ಮಾತ್ರ ಗೆಲುವು ದಾಖಲಿಸಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕ ದಿನ ವಿಶ್ವ ಕಪ್​ನಲ್ಲಿಯೂ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.

ಇದನ್ನೂ ಓದಿ: ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಸಿದ ಹವಾಮಾನ ಇಲಾಖೆ

ನ್ಯೂಯಾರ್ಕ್​ನ ನಸ್ಸೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.3 ಓವರ್​ಗಳಲ್ಲಿ 119 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿಂಗ್​ ಆರಂಭಿಸಿದ ಪಾಕಿಸ್ತಾನ ತಂಡ ಭಾರತದ ಭರ್ಜರಿ ಬೌಲಿಂಗ್​ಗೆ ಹೆದರಿ. ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್​ಗೆ 113 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಭಾರತೀಯ ಬೌಲರ್​ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಬ್ಯಾಟರ್​ಗಳು ಪೇರಿಸಿದ್ದ 113 ರನ್​ಗಳ ಮೊತ್ತವನ್ನು ಕಾಪಾಡಿದರು.

2007ರ ಟಿ20 ವಿಶ್ವಕಪ್​ನ ನಂತರದಿಂದದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು.

RELATED ARTICLES

Related Articles

TRENDING ARTICLES