Thursday, September 19, 2024

ಜೂನ್‌ 12ಕ್ಕೆ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪದಗ್ರಹಣ

ಬೆಂಗಳೂರು: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಜೂನ್ 12ರಂದು ಸಂಜೆ 4.55ಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೂನ್ 12 ರಂದು ಸಂಜೆ 4.55ಕ್ಕೆ ಆಂಧ್ರಪ್ರದೇಶ ಸಿಎಂ ಆಗಿ ನಾರಾ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸದ ಕ್ಷಣವಾಗಿದೆ. ಎಂದು ಟಿಡಿಪಿ ಹೇಳಿದೆ.

ಇದನ್ನೂ ಓದಿ: ನಾಳೆ ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಟಿಡಿಪಿ ಯಾವುದಾದರೂ ನಿರ್ದಿಷ್ಟ ಸಚಿವಾಲಯದ ಬೇಡಿಕೆಗಳನ್ನು ಇರಿಸಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಟಿಡಿಪಿ ನಾಯಕ ರಘುರಾಮ ಕೃಷ್ಣರಾಜು,  ನಾನು ಹಾಗೆ ಯೋಚಿಸುವುದಿಲ್ಲ. ಏಕೆಂದರೆ ಅದು ನನ್ನ ಪ್ರತಿಕ್ರಿಯೆಯ ವಿಷಯವಲ್ಲ. ಆದರೆ, ನಮ್ಮ ಪಕ್ಷದ ನಾಯಕರು ಬೇಡಿಕೆಯಿಡುವ ರೀತಿಯ ವ್ಯಕ್ತಿಯಲ್ಲ. ಅವರ ಉತ್ತಮ ಸಂಬಂಧದ ಆಧಾರದ ಮೇಲೆ ನಮ್ಮ ಪಕ್ಷಕ್ಕೆ ಏನು ಸಿಗಬೇಕೋ ಅದು ಸಿಗುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES