Thursday, September 19, 2024

4ನೇ ಬಾರಿಗೆ ಆಂಧ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಚಂದ್ರಬಾಬು ನಾಯ್ಡು ಸಿದ್ದತೆ

ಆಂದ್ರಪ್ರದೇಶ: ನಾಲ್ಕನೆ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ನಾ.ರಾ ಚಂದ್ರಬಾಬು ನಾಯ್ಡು ಅವರು ಗದ್ದುಗೆ ಏರಲಿದ್ದಾರೆ. ಇದೇ ಜೂನ್​ 9 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಜೊತೆಗೆ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ಆಡಳಿತ ಪಕ್ಷ ವೈಎಸ್​ಆರ್ ಕಾಂಗ್ರೆಸ್​  ವಿರುದ್ದ ಎನ್​ಡಿಎ ಮೈತ್ರಿ ಕೂಟ (TDP, JSP, BJP) ಪಕ್ಷಗಳು ಸೇರಿ 160ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜರಭೇರಿ ಸಾಧಿಸಿದೆ. ಈ ಹಿನ್ನೆಲೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್​ ಆಗಿದ್ದು ಇದೇ ಜೂನ್​ 9ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಗದ್ದುಗೆಗೆ ಏರಲಿದ್ದಾರೆ.

ಇದನ್ನೂ ಓದಿ: Loksabha Election Result 2024: ರಾಜ್ಯದ ಮೂವರು ಮಾಜಿ ಸಿಎಂಗಳಿಗೆ ಭರ್ಜರಿ ಗೆಲುವು

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮತ್ತು ಇಂಡಿಯಾ ಕೂಟಗಳು ಕೇಂದ್ರದಲ್ಲಿ ಅಧಿಕಾರಕ್ಕೇರಲು ಸಂಖ್ಯಾಬಲದ ಅವಶ್ಯಕತೆ ಇರುವ ಹಿನ್ನೆಲೆ ಮಿತ್ರಪಕ್ಷಗಳ ಜೊತೆ ಲಾಭಿ ನಡೆಸಲು ಮುಂದಾಗಿದೆ. ಈ ನಡುವೆ ಆಂಧ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮನೆಗೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದ ನಾಯಕರು ಭೇಟಿ ನೀಡುತ್ತಿದ್ದು ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES