Tuesday, September 17, 2024

Rave Party: ನಟಿ ಹೇಮಾಗೆ ನೋಟಿಸ್​​​, ಸಿಸಿಬಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಕೇಸ್​ಗೆ ಸಂಬಂಧಿಸಿ ಮತ್ತಷ್ಟು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿವೆ. ತೆಲುಗು ನಟಿ ಹೇಮಾಗೆ ನೋಟಿಸ್ ನೀಡಿದ ಬೆನ್ನಲ್ಲೇ ಆಂಧ್ರ ಪ್ರದೇಶದ ರಾಜಕಾರಣಿಗಳು ಸಿಸಿಬಿಗೆ ನಿರಂತರ ಕರೆ ಮಾಡಿ ಹೇಮಾ ಬಂಧನ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ.

ರೇವ್‌ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಹೆಚ್ಚಿನ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ಒತ್ತಡ ಹೆಚ್ಚಾಗಿದೆ. ಇನ್ನು ಮತ್ತೊಂದೆಡೆ ಸಿಸಿಬಿ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಸತ್ಯ ಬಯಲಾಗುತ್ತಿದೆ. ಇದು ಕೇವಲ ಡ್ರಗ್ಸ್ ಪಾರ್ಟಿ ಮಾತ್ರವಲ್ಲ‌. ರೇವ್ ಪಾರ್ಟಿಯ ಮತ್ತಷ್ಟು ಕರಾಳ ಮುಖ ಬಯಲಾಗುತ್ತಿದೆ.

ಇದನ್ನೂ ಓದಿ: ಹಣ ಡಬಲ್​ ಮಾಡಿಕೊಡುವುದಾಗಿ ಹೇಳಿ ದಂಪತಿಯಿಂದ ₹30 ಕೋಟಿ ಪಂಗನಾಮ

ಈಗಾಗಲೇ ಬಂಧನದಲ್ಲಿರುವವರ ಖಾತೆಯಲ್ಲಿನ 86 ಲಕ್ಷ ಹಣ ಫ್ರೀಜ್ ಮಾಡಲಾಗಿದೆ. ಒಟ್ಟು ಏಳು ಬ್ಯಾಂಕ್ ಖಾತೆಗಳಲ್ಲಿನ 86 ಲಕ್ಷ ಹಣ‌ವನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಅಲ್ಲದೆ ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ಕೂಡ ನಡೆಯುತ್ತಿತ್ತು ಎನ್ನಲಾಗಿದೆ.

RELATED ARTICLES

Related Articles

TRENDING ARTICLES