Tuesday, September 17, 2024

ಪುಡಿರೌಡಿಗಳ ಅಟ್ಟಹಾಸ: ಅಂಗಡಿ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಂಗಳೂರು: ಆನೇಕಲ್​ನಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದ್ದು ಅಂಗಡಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದನ್ನು ಅಂಗಡಿ ಮಾಲೀಕ ಪ್ರಶ್ನೆ ಮಾಡಿದ್ದಕ್ಕೆ ಮಾರಕಾಸ್ತ್ರಗಳನ್ನು ಹಿಡಿದು ದಮ್ಕಿ ಹಾಕಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಆನೇಕಲ್​ ತಾಲೂಕಿನ ಇಂಡ್ಲವಾಡಿ ಕ್ರಾಸ್​ಬಳಿ ಇರುವ ಭೈರವೇಶ್ವವರ ಪ್ರಾವಿಜನ್​ ಅಂಗಡಿಗೆ ಯುವಕರ ವಾಹನ ಡಿಕ್ಕಿಯಾಗಿದೆ. ಇದನ್ನು ಕಂಡು ಅಂಗಡಿಯಲ್ಲಿದ್ದ ಶಿವು ಎಂಬಾತ ಯುವಕರನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಹುಡುಗರನ್ನು ಕರೆಸಿ ಮಾರಕಾಸ್ತ್ರಗಳನ್ನು ಹಿಡಿದು ಶಿವು ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ: ಹುಲಿಗೆಮ್ಮ ದೇವಿ ದರ್ಶನ ಪಡೆದು ಮನೆಗೆ ಹೊರಟವರು ಮಸಣಕ್ಕೆ! ಸ್ಥಳದಲ್ಲೇ ಮೂವರು ಸಾವು

ತಲೆ ಮತ್ತು ಕೈಗೆ ಗಂಭೀರವಾಗಿ ಗಾಯಗಳಾಗಿದ್ದ ಶಿವು ಎಂಬಾತನನ್ನು ಆನೇಕಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES