Friday, September 20, 2024

SSLC ಪರೀಕ್ಷೆ-2 ಮುಂದೂಡಿಕೆ : ಜೂ.14 ರಿಂದ ಪರೀಕ್ಷೆ-2 ಪ್ರಾರಂಭ

ಬೆಂಗಳೂರು : ಮೇ 15 ರಿಂದ ಆರಂಭವಾಗಿದ್ದ SSLC ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಲಾಗಿದ್ದು, ಮೇ 29 ರಿಂದ ಜೂನ್ 13ರವರೆಗೆ ನಡೆಸಲು‌ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆ SSLC ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್​​ 7 ರಿಂದ ನಡೆಯಬೇಕಿದ್ದ SSLC ಪರೀಕ್ಷೆ-2 ಅನ್ನು ಕೂಡ ಮುಂದೂಡಲಾಗಿದೆ. ಈ ಪರೀಕ್ಷೆಯನ್ನು ಜೂನ್​ 14 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ಈ ಹಿಂದೆ ಮೇ 15ರಿಂದ ಜೂನ್‌ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ಈಗ ಸರ್ಕಾರದ ಸೂಚನೆ ಮೇರೆಗೆ ದಿನಾಂಕವನ್ನು ಮುಂದೂಡಿರುವ ಪ್ರೌಢ ಶಿಕ್ಷಣ ಇಲಾಖೆ, ವಿಶೇಷ ತರಗತಿಗಳನ್ನು ಮೇ 29 ರಿಂದ ಜೂನ್‌ 13ರವರೆಗೆ ನಡೆಸಲು ಆದೇಶ ಹೊರಡಿಸಿದೆ.

ಈ ಸುದ್ದಿ ಓದಿದ್ದೀರಾ? : ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇರಲ್ಲ : ಸಚಿವ ಮಧು ಬಂಗಾರಪ್ಪ 

ಇನ್ನು SSLC ಪರೀಕ್ಷೆ-2 ಜೂನ್ 14ರಿಂದ  ಆರಂಭವಾಗಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಲಿದೆ.

RELATED ARTICLES

Related Articles

TRENDING ARTICLES