Tuesday, September 17, 2024

ಡಿ ಬಾಸ್ ‘ಡೆವಿಲ್’ ಚಿತ್ರದ ನಾಯಕಿ ತುಳುನಾಡ ಬೆಡಗಿ ‘ರಚನಾ ರೈ’ : ನೆಲದ ಪ್ರತಿಭೆಗೆ ಮನ್ನಣೆ

ಬೆಂಗಳೂರು : ‘ಕಾಟೇರ’ ಬಿಗ್ ಸಕ್ಸಸ್ ಬೆನ್ನಲೇ ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಇದೀಗ ‘ಡೆವಿಲ್’ ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಅಧಿಕೃತವಾಗಿ ಘೋಷಣೆ ಆಗಿದೆ.

ಡೆವಿಲ್ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಕರಾವಳಿ ಬೆಡಗಿ ಪುತ್ತೂರಿನ ರಚನಾ ರೈ ಕಾಣಿಸಿಕೊಳ್ಳಲಿದ್ದಾರೆ. ‘ನೆಲದ ಪ್ರತಿಭೆಗೆ ಮನ್ನಣೆ’. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ ‘ರಚನಾ ರೈ’ ಸ್ವಾಗತ! ಎಂದು ಚಿತ್ರತಂಡ ಟ್ವೀಟ್​ ಮಾಡಿದೆ.

ರಚನಾ ರೈ ಪುತ್ತೂರಿನಲ್ಲಿ ಹುಟ್ಟಿ ಬೆಳೆದವರು. ಮಾಡೆಲಿಂಗ್‌ನಲ್ಲಿಯೂ ಗುರುಸಿಕೊಂಡಿದ್ದಾರೆ. ತುಳು ಭಾಷೆಯ ಸರ್ಕಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ನಟ ಧನ್ವೀರ್ ಗೌಡ ಅಭಿನಯದ ‘ವಾಮನ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು. ಇದೀಗ, ದರ್ಶನ್​ ಅವರ ಡೆವಿಲ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಗಾಸಿಫ್​ಗಳಿಗೆ ತೆರೆ ಎಳೆದ ಚಿತ್ರತಂಡ

ಈ ಹಿಂದೆಯೇ ದರ್ಶನ್ ಮುಂದಿನ ಚಿತ್ರ ‘ಡೆವಿಲ್’ ದಿ ಹೀರೋ ಸಿನಿಮಾಗೆ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಗಾಸಿಪ್‌ಗಳ ಮಧ್ಯೆ ದರ್ಶನ್ ಮುಂದಿನ ಚಿತ್ರದ ನಟಿಯಾಗಿ ರಚನಾ ರೈ ಹೆಸರು ಘೋಷಣೆಯಾಗಿದೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಚಿತ್ರತಂಡ ತೆರೆ ಎಳೆದಿದೆ.

ಡೆವಿಲ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಸೂಪರ್‌ ಸಕ್ಸಸ್ ಆಗಿದೆ. ಥಿಯೇಟರ್‌ನಲ್ಲಿಯೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಹೀಗಾಗಿ, ಸಹಜವಾಗಿಯೇ ದರ್ಶನ್‌ ಅಭಿನಯದ ಡೆವಿಲ್ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದಲ್ಲಿ ನಟನಾಗಿ ಡಿ ಬಾಸ್ ದರ್ಶನ್ ಕಾಣಿಸಿ ಕೊಂಡರೆ, ನಾಯಕಿಯಾಗಿ ರಚನಾ ರೈ ಕಾಣಿಸಿಕೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES