Thursday, September 19, 2024

ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇರಲ್ಲ : ಸಚಿವ ಮಧು ಬಂಗಾರಪ್ಪ

ಬೆಂಗಳೂರು : ಎಸ್ಸೆಸ್ಸೆಲ್ಸಿ (SSLC) ಗ್ರೇಸ್ ಮಾರ್ಕ್ಸ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗಲೂ 5% ಗ್ರೇಸ್​ ಮಾರ್ಕ್ಸ್​ ಇತ್ತು. ಕೋವಿಡ್ ವೇಳೆ 10% ಮಾಡಲಾಗಿತ್ತು. ಕಾನ್ಫಿಡೆಂಟ್ ಕೊಟ್ಟು ಪಾಸ್ ಮಾಡಲು ನಿರ್ಧಾರವಾಗಿದೆ. ಹಾಗಾಗಿ,  20% ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಇದು ಈ ವರ್ಷಕ್ಕೆ ಯಾವ ಸಮಸ್ಯೆ ಇಲ್ಲ. ಮುಂದಿನ ವರ್ಷದಿಂದ ಇದು ಇರಲ್ಲ. ಮಕ್ಕಳನ್ನ ಇಂಪ್ರೂವ್  ಮಾಡೋಕೆ ಇದನ್ನ ಮಾಡಿದ್ದೆವು. ಹಾಗಾಗಿ, ಇದು ಬೇಡ ಅನ್ನೋದು ಇದೆ. ಹಾಗಾಗಿ, ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇರಲ್ಲ. ಗ್ರೇಸ್ ಮಾರ್ಕ್ಸ್ ನಿಂದ ಮಕ್ಕಳಲ್ಲಿ ಇಂಫ್ರೂವ್ ಮೆಂಟ್ ಇತ್ತು. ಆದರೆ, ಈಗ ಬೇಡ ಎನ್ನುವ ನಿಲುವಿಗೆ ಬಂದಿದ್ದೇವೆ ಎಂದು ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.

ಇಲಾಖೆ ಹೇಗೆ ನಡೆಸಬೇಕೆಂದು‌ ನನಗೆ ಗೊತ್ತಿದೆ

ಫುಲ್ ಟೈಮ್ ಶಿಕ್ಷಣ ಸಚಿವರಿಲ್ಲ ಎಂಬ ಸುರೇಶ್ ಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಇಲಾಖೆ ಹೇಗೆ ನಡೆಸಬೇಕೆಂದು‌ ನನಗೆ ಗೊತ್ತಿದೆ. ಅವರು ಫಸ್ಟ್ ವಿರೋಧ ಪಕ್ಷದಲ್ಲಿ ಕುಳಿತಿಲ್ಲ. ಮೊದಲು ಅಲ್ಲಿ ಕೂರೋಕೆ ಅವರಿಗೆ ಹೇಳಿ. ಆಮೇಲೆ ಇದರ ಬಗ್ಗೆ ಮಾತನಾಡೋಣ ಎಂದು ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES