Wednesday, September 18, 2024

RR ವಿರುದ್ಧ ಚೆನ್ನೈಗೆ ‘ಸೂಪರ್’ ಗೆಲುವು : RCB ಪ್ಲೇಆಫ್ ಕನಸು ಭಗ್ನ ಮಾಡಿದ CSK

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಹೈದರಾಬಾದ್​ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಅಲಂಕರಿಸಿತು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, 141 ರನ್​ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ, 18.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಆರ್​ಸಿಬಿ ಪ್ಲೇಆಫ್​ ಕನಸನ್ನು ಭಗುತೇಕ ಭಗ್ನ ಮಾಡಿತು.

142 ರನ್​ ಗುರಿ ಬೆನ್ನಟ್ಟಿದ ಚೆನ್ನೈಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. 27 ರನ್ ಗಳಿಸಿ ರಚಿನ್ ರವೀಂದ್ರ ಔಟಾದರು. ಬಳಿಕ ಬಂದ ಡೇರಿಲ್ ಮಿಚೆಲ್ 22 ರನ್​ ಸಿಡಿಸಿ ನಿರ್ಗಮಿಸಿದರು. ಮೊಯಿನ್ ಅಲಿ 10 ರನ್​ಗೆ ಆಟ ಮುಗಿಸಿದರು.

ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಆಸರೆಯಾದರು. ಶಿವಂ ದುಬೆ 18, ರವೀಂದ್ರ ಜಡೇಜಾ 5 ರನ್​ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಸಮೀರ್ ರಿಜ್ವಿ ಜೊತೆಗೂಡಿ ಗಾಯಕ್ವಾಡ್ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಋತುರಾಜ್ ಗಾಯಕ್ವಾಡ್ ಅಜೇಯ 42 ಹಾಗೂ ಸಮೀರ್ ರಿಜ್ವಿ ಅಜೇಯ 15 ಸಿಡಿಸಿದರು.

RCB ಪ್ಲೇಆಫ್​ ಕನಸಿಗೆ ಸಂಕಷ್ಟ

ರಾಜಸ್ಥಾನ್ ರಾಯಲ್ಸ್ ಪರ ರವಿಚಂದ್ರನ್ ಅಶ್ವಿನ್ 2, ಯುಜ್ವೇಂದ್ರ ಚಾಹಲ್ ಹಾಗೂ ನಾಂದ್ರೆ ಬರ್ಗರ್ ತಲಾ ಒಂದು ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಗಿದೆ. ​ಅಲ್ಲದೇ ಆರ್​ಸಿಬಿ ಪ್ಲೇಆಫ್​ ಕನಸಿಗೆ ಸಂಕಷ್ಟ ತಂದೊಡ್ಡಿದೆ.

RR ನಿಧಾನ ಗತಿಯ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಚೆನ್ನೈ ಬೌಲರ್​ಗಳು ಇದನ್ನು ಸದುಪಯೋಗಪಡಿಸಿಕೊಂಡರು. ರಾಜಸ್ಥಾನ ಪರ ರಿಯಾನ್ ಪರಾಗ್ 47, ಯಶಸ್ವಿ ಜೈಸ್ವಾಲ್ 24, ಸಂಜು ಸ್ಯಾಮ್ಸನ್ 15, ಜೋಸ್ ಬಟ್ಲರ್ 21, ಧ್ರುವ್ ಜುರೆಲ್ 28 ರನ್​ ಗಳಿಸಿದರು. ಚೆನ್ನೈ ಪರ ಸಿಮರ್ಜೀತ್ ಸಿಂಗ್ 3 ಹಾಗೂ ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES