Friday, September 20, 2024

ಸಿಡಿಲು ಬಡಿದು ಮಹಿಳೆ ಸಾವು, 20ಕ್ಕೂ ಹೆಚ್ಚು ಮೇಕೆ ಬಲಿ

ಬೆಂಗಳೂರು ಗ್ರಾಮಾಂತರ : ಸಿಡಿಲು ಬಡಿದು ಮಹಿಳೆ ದಾರುಣ ಸಾವನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ ಸಿಡಿಲಿಗೆ ಬಲಿಯಾದ ಮಹಿಳೆ. ಮಹಿಳೆ ಜೊತೆ 20ಕ್ಕೂ ಹೆಚ್ಚು ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಇಂದು ಮಧ್ಯಾಹ್ನ ಧಿಡೀರ್ ಆಗಿ ಮಳೆ ಶುರುವಾಗಿದ್ದು, ರತ್ನಮ್ಮ ಅವರು ತೋಟದ ಬಳಿ ಬೇವಿನ ಮರದಡಿ ಮೇಕೆಗಳ ಜೊತೆ ನಿಂತಿದ್ದರು. ಈ ವೇಳೆ ರತ್ಮಮ್ಮಗೆ ಸಿಡಿಲು ಬಡಿದು ಸಾವನ್ನಪ್ಪಿದ್ಧಾರೆ.

ರಾಮನಗರದ ಹಲವೆಡೆ ವರುಣನ ಸಿಂಚನ

ರೇಷ್ಮೆನಾಡು ರಾಮನಗರದ ಹಲವೆಡೆ ವರುಣನ ಸಿಂಚನ ಆಗಿದೆ. ಬಿಸಿಲಿಗೆ ಬಳಲಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ದಿಢೀರ್ ವರುಣನ ಆಗಮನಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಮನಗರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಆನೇಕಲ್ ಸುತ್ತಮುತ್ತ ಧಾರಾಕಾರ ಮಳೆ

ಆನೇಕಲ್ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಇನ್ನು ಆನೇಕಲ್​​​ನಲ್ಲಿ ಈ ವರ್ಷದ ಮೊದಲ ಭರ್ಜರಿ ಮಳೆಯಾಗಿದ್ದು, ಸೂಳಗಿರಿಯಲ್ಲಿ  ಆಲಿಕಲ್ಲು ಮಳೆ ಬಿದಿದೆ. ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಸಂತಸ ಮೂಡಿದೆ. ಗುಡುಗು, ಗಾಳಿ ಸಹಿತ ಮಳೆಯಿಂದಾಗಿ ಭೂಮಿ‌ ತಂಪಾಗಿದೆ.

RELATED ARTICLES

Related Articles

TRENDING ARTICLES