Thursday, September 19, 2024

ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ : KKRಗೆ 24.75 ಕೋಟಿ ಒಡೆಯ ಕಂಬ್ಯಾಕ್

ಬೆಂಗಳೂರು : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 24.75 ಕೋಟಿ ರೂ. ಒಡೆಯ ಮಿಚೆಲ್ ಸ್ಟಾರ್ಕ್ ಕೆಕೆಆರ್​ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಐಪಿಎಲ್​ನ 47ನೇ ರೋಚಕ ಪಂದ್ಯ ನಡೆಯುತ್ತಿದೆ. ತವರು ಅಂಗಳದಲ್ಲಿ ಡೆಲ್ಲಿ ತಂಡವನ್ನು ಮಣಿಸಲು ಕೋಲ್ಕತ್ತಾ ರಣತಂತ್ರ ರೂಪಿಸಿದೆ. ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ.

ಪ್ರಸಕ್ತ ಆವೃತ್ತಿಯಲ್ಲಿ ಕೆಕೆಆರ್​ 8 ಪಂದ್ಯಗಳನ್ನು ಆಡಿದೆ. ಇದರಲ್ಲಿ 5 ಗೆಲುವು ಹಾಗೂ 3 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಡೆಲ್ಲಿ 10 ಪಂದ್ಯಗಳನ್ನು ಆಡಿದ್ದು, 5 ಗೆಲುವು ಹಾಗೂ 5 ಸೋಲು ಅನುಭವಿಸಿದೆ. ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್  

ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್(ನಾಯಕ/ವಿ.ಕೀ.), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರಸಿಖ್ ದಾರ್ ಸಲಾಂ, ಲಿಜಾದ್ ವಿಲಿಯಮ್ಸ್, ಖಲೀಲ್ ಅಹ್ಮದ್

ಡೆಲ್ಲಿ ಇಂಪ್ಯಾಕ್ಟ್ ಆಟಗಾರರು : ಮುಖೇಶ್ ಕುಮಾರ್, ಪ್ರವೀಣ್ ದುಬೆ, ರಿಕಿ ಭುಯಿ, ಸುಮಿತ್ ಕುಮಾರ್, ಕುಮಾರ್ ಕುಶಾಗ್ರಾ

ಕೋಲ್ಕತ್ತಾ ನೈಟ್ ರೈಡರ್ಸ್

ಫಿಲಿಪ್ ಸಾಲ್ಟ್ (ವಿ.ಕೀ.), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

KKR ಇಂಪ್ಯಾಕ್ಟ್ ಆಟಗಾರರು : ಆಂಗ್ಕ್ರಿಶ್ ರಘುವಂಶಿ, ಸುಯಾಶ್ ಶರ್ಮಾ, ಅನುಕೂಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್

RELATED ARTICLES

Related Articles

TRENDING ARTICLES