Saturday, May 4, 2024

RCBಗೆ 223 ರನ್ ಬೃಹತ್ ಟಾರ್ಗೆಟ್ : ಇಂದು ಗೆದ್ದರಷ್ಟೇ RCB ತಂಡಕ್ಕೆ ಉಳಿಗಾಲ, ಗೆಲ್ಲುತ್ತಾ?

ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಬೃಹತ್ ಮೊತ್ತ ದಾಖಲಿಸಿತು.

ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಕೆಕೆಆರ್​ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್​ ಕಲೆಹಾಕಿತು.

ಇನ್ನಿಂಗ್ಸ್​ ಆರಂಭಿಸಿದ ಕೆಕೆಆರ್​ಗೆ ಫಿಲಿಪ್ ಸಾಲ್ಟ್ ಹಾಗೂ ಸುನಿಲ್ ನರೈನ್ ಉತ್ತಮ ಆರಂಭ ನೀಡಿದರು. ಸಾಲ್ಟ್​ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಬೌಂಡರಿಗಳೊಂದಿಗೆ 48 ರನ್​ ಚಚ್ಚಿದರು.

ನರೈನ್ 10 ರನ್​ಗೆ ಔಟಾದರು. ನಾಯಕ ಶ್ರೇಯಸ್​ ಅಯ್ಯರ್ ಜವಾಬ್ದಾರಿಯುತ ಆಟವಾಡಿದರು. 36 ಎಸೆತಗಳಲ್ಲಿ 50 ರನ್​ ಸಿಡಿಸಿದರು. ರಿಂಕು ಸಿಂಗ್ 24, ರಮಣದೀಪ್ ಸಿಂಗ್ ಅಜೇಯ 4 ಹಾಗೂ ಆಂಡ್ರೆ ರಸೆಲ್ ಅಜೇಯ 27 ರನ್​ ಗಳಿಸಿದರು.

RCB ಬೌಲರ್​ಗಳು ದುಬಾರಿ

ಆರ್​ಸಿಬಿ ಪರ ಯಶ್​ ದಯಾಳ್ ಹಾಗೂ ಕ್ಯಾಮೆರಾನ್ ಗ್ರೀನ್​ ತಲಾ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಹಾಗೂ ಲಾಕಿ ಫರ್ಗುಸನ್​ ತಲಾ ಒಂದು ವಿಕೆಟ್ ಪಡೆದರು. ದಯಾಳ್ 56, ಫರ್ಗುಸನ್​ 47, ಸಿರಾಜ್ 40 ರನ್​ ಬಿಟ್ಟುಕೊಟ್ಟು ದುಬಾರಿ ಬೌಲರ್​ ಎನಿಸಿಕೊಂಡರು. ಪ್ಲೇಆಪ್​ ಕನಸು ನನಸಾಗಬೇಕು ಎಂದರೆ ಇಂದಿನ ಪಂದ್ಯವನ್ನು ಆರ್​ಸಿಬಿ ಗೆಲ್ಲಲೇಬೇಕಿದೆ.

RELATED ARTICLES

Related Articles

TRENDING ARTICLES