Tuesday, September 17, 2024

ಮಹಾನಾಯಕ ಅಂಬೇಡ್ಕರ್​ ನಮ್ಮ ದೇಶದ ಮಾರ್ಗದರ್ಶಕ: ಪಿ.ಗೋವಿಂದರಾಜು

ದೊಡ್ಡಬಳ್ಳಾಪುರ : ನಮ್ಮ ಭಾರತ ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಮುಖರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಬರಹಗಳೇ ಭಾರತೀಯರಿಗೆ ಮಾರ್ಗದರ್ಶನವಾಗಿವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜಕುಮಾರ್ ಕಲಾಮಂದಿರ ಆವರಣದಲ್ಲಿ‌ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಮತ್ತು ಸಾಹಿತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಪ್ರಭಾವ ಅಪಾರವಾಗಿದೆ. ಅಂಬೇಡ್ಕರ್ ಚಿಂತನೆಗಳ ಪ್ರಭಾವ ಕನ್ನಡದ ದಲಿತ, ಬಂಡಾಯ, ಪ್ರಗತಿಪರ ಸಾಹಿತಿಗಳ ಮೇಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜಗತ್ತಿನ ಹಲವಾರು ದೇಶಗಳು ಪ್ರಶಂಸೆ ಮಾಡಿವೆ ಎಂದರು.

ಇದನ್ನೂ ಓದಿ: ಕುರಿ ಕಾಯುತ್ತಿದ್ದ ನಾನು ಸಿಎಂ ಆಗಲು ಅಂಬೇಡ್ಕರ್​ ಸಂವಿಧಾನ ಕಾರಣ: ಸಿಎಂ ಸಿದ್ದರಾಮಯ್ಯ

ಕನ್ನಡ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ. ಅಗ್ನಿವೆಂಕಟೇಶ ಮಾತನಾಡಿ, ನಮ್ಮ ದೇಶದ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರು ನಮಗೆ ಸಮಾನತೆಯ ಹಾದಿಯನ್ನು ತೋರಿಸಿದರು. ಜನಪರ ಹೋರಾಟಗಾರರಿಗೆ ಅಂಬೇಡ್ಕರ್ ಸದಾ ಸ್ಫೂರ್ತಿ. ಶೋಷಣೆ ಮುಕ್ತವಾದ ಸಮಾಜ ನಿಮಾರ್ಣವಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮಹತ್ವವನ್ನು ತಿಳಿಸಿದರು ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ ಎಂದರು.

ಕವಯಿತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ವೈಯಕ್ತಿಕ ಜೀವನಕ್ಕಿಂತ. ದೇಶದ ಒಳಿತಿಗಾಗಿ ಬದುಕಿದ್ದವರು. ತಮ್ಮ ಅಪಾರ ಓದು ಮತ್ತು ಜ್ಞಾನಾರ್ಜನೆಯಿಂದಾಗಿ ಜಗತ್ತೇ ಮೆಚ್ಚುವಂತಹ ಸಂವಿಧಾನ ರಚಿಸಲು ಸಹಕಾರಿ ಆಯಿತು. ಶೋಷಿತ ಸಮುದಾಯಗಳಿಗೆ ಸಮಾನತೆಯ ಹಕ್ಜು ದೊರೆಯಲು ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ‌ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ. ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಸಾ.ಲ.ಕಮಲನಾಥ್ , ಕಸಬಾ ಹೋಬಳಿ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ದೊಡ್ಡಬೆಳವಂಗಲ ಹೋಬಳಿ ಘಟದ ಗೌರವ ಕಾರ್ಯದರ್ಶಿ ಮತ್ತು ಮುಖ್ಯಶಿಕ್ಷಕ ಅಂಜನಮೂರ್ತಿ, ಕನ್ನಡ ಜಾಗೃತ ವೇದಿಕೆ ತಾಲ್ಲೂಕು ಅಧ್ಯಕ್ಷ ನಾಗರಾಜು, ದಲಿತ ವಿಮೋಚನಾ ಸೇನೆ ನಗರ ಅಧ್ಯಕ್ಷ ಮಧು, ಪ್ರಗತಿಪರ ಸಂಘಟನೆಯ ಅಬ್ದುಲ್ ಸುಹಾನ್ ಸಾಬ್, ಆರಿಫ್, ದರ್ಗಾಜೋಗಿಹಳ್ಳಿ ಮಲ್ಲೇಶ್ , ದಲಿತ ವಿಮೋಚನಾ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು. ‌

RELATED ARTICLES

Related Articles

TRENDING ARTICLES