Tuesday, September 17, 2024

ಇಂದು ನಾಡಿನಾದ್ಯಂತ ಪವಿತ್ರ ರಂಜಾನ್ ಹಬ್ಬ ಆಚರಣೆ : ಹಬ್ಬಕ್ಕೆ ಶುಭ ಕೋರಿದ ಸಿಎಂ

ಬೆಂಗಳೂರು : ಇಂದು ಮುಸ್ಲಿಮರ ಪವಿತ್ರ ಹಬ್ಬ ರಂಜಾನ್​ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ (ಚಂದ್ರ ದರ್ಶನ) ಕಾಣಿಸಿಕೊಂಡಿದ್ದು, ಮರುದಿನವೇ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್‌ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ.

ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನ‌ಲ್ಲಿ ಸುಖ, ಶಾಂತಿ, ಸೌಹಾರ್ದತೆಯು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಶುಭಕೋರಿದ್ದಾರೆ.

 

ರಂಜಾನ್ ಹಿನ್ನೆಲೆ ಬೆಂಗಳೂರಿನ ಚಾಮರಾಚಪೇಟೆಯಲ್ಲಿರೋ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಂ ಬಾಂಧವರು ನಮಾಜ್‌ ಮಾಡುತ್ತಿದ್ದಾರೆ. ಅಲ್ಲದೇ ಸಿಎಂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಮುತ್ತ ಒಬ್ಬ ಡಿಸಿಪಿ ಹಾಗೂ ನಾಲ್ಕು ಮಂದಿ ಎಸಿಪಿ ಎರಡು ಕೆಎಸ್‌ಆರ್‌ಪಿ ತುಕಡಿ ಸೇರಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಶಾಕ್​ : ಇಂದು ಕಾಂಗ್ರೆಸ್​ ಸೇರಲಿರುವ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪುತ್ರ

ರಂಜಾನ್‌ ಆಚರಣೆಗೂ ಮುನ್ನ ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸವೂ ಎನಿಸಿಕೊಂಡಿದೆ.

ಈ ಸಮಯದಲ್ಲಿ ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನು ಕಲಿಯುತ್ತಾರೆ. ಬಡವರ ಹಸಿವು ಅರಿಯುವ ಜೊತೆಗೆ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು? ಎಂಬ ಪಾಠವನ್ನೂ ಉಪವಾಸ ಕಲಿಸುತ್ತದೆ. ಅಲ್ಲದೆ ರಾತ್ರಿ ವೇಳೆ ನಡೆಯುವ ವಿಶೇಷ ತರಾವೀಹ್ ನಮಾಜ್‌ಗಳಲ್ಲಿ ಪವಿತ್ರ ಕುರಾನ್ ಪಠಿಸಲಾಗುತ್ತದೆ. ಕುರಾನ್‌ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್‌ಗೆ ನೇತೃತ್ವ ವಹಿಸುತ್ತಾರೆ. ಮನುಷ್ಯನನ್ನು ಅನ್ಯಚಿತ್ತದೆಡೆಗೆ ಕೊಂಡೊಯ್ಯುವ ಮಾರ್ಗವನ್ನು ಮುಚ್ಚಿ, ಒಳಿತಿನ ಬಗ್ಗೆ ಮಾತ್ರ ಚಿಂತಿಸುವಂತೆ ಮಾಡುವುದು ರಂಜಾನ್ ಮಾಸದ ವಿಶೇಷ. ಹಾಗಾಗಿಯೇ ಈ ಮಾಸದಲ್ಲಿ ಅಲ್ಲಾನ ಪ್ರೀತಿಗಳಿಸುವ ಇಚ್ಛೆಯೊಂದಿಗೆ ಆಹಾರ, ಮದ್ಯ ಸೇವನೆಯನ್ನೂ ತ್ಯಜಿಸುತ್ತಾರೆ. ಕಾಮಾಸಕ್ತಿ, ಮನರಂಜನೆಯಿಂದ ದೂರವಿದ್ದು, ದುಡಿಮೆ ನಂಬಿ ಬದುಕುತ್ತಾರೆ.

ಈ ಮಾಹೆಯಲ್ಲಿ ದಾನ-ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ.

 

RELATED ARTICLES

Related Articles

TRENDING ARTICLES