Friday, May 3, 2024

Mandya Lok Sabha Election Survey : ಒಕ್ಕಲಿಗರ ಅಖಾಡದಲ್ಲಿ ಯಾರ ಕಡೆಗೆ ಮತದಾರರ ಒಲವು?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಮಂಡ್ಯ ಲೋಕಸಭಾ ಕ್ಷೇತ್ರದ ಪರಿಚಯ :

ಲೋಕಸಭಾ ಕ್ಷೇತ್ರ : ಮಂಡ್ಯ

ಹಾಲಿ ಸಂಸದರು : ಸುಮಲತಾ ಅಂಬರೀಷ್

=======================

ಜೆಡಿಎಸ್​ ಅಭ್ಯರ್ಥಿ :  ಕುಮಾರಸ್ವಾಮಿ

ಕಾಂಗ್ರೆಸ್ ಅಭ್ಯರ್ಥಿ :  ಸ್ಟಾರ್ ಚಂದ್ರು

2019 ಲೋಕಸಭೆ ಹಣಾಹಣಿ :

ಸುಮಲತಾ : ಪಕ್ಷೇತರ : 7,03,660 : ಶೇ. 51.02

ನಿಖಿಲ್ ಕುಮಾರಸ್ವಾಮಿ : ಜೆಡಿಎಸ್ : 5,77,784 : ಶೇ. 41.89

ಎಂ.ಎಲ್.ಶಶಿಕುಮಾರ : ಪಕ್ಷೇತರ : 18,323 : ಶೇ. 1.33

ಚಲಾವಣೆಯಾದ ಮತ : 13,79,622 : ಶೇ. 80.59

ಸುಮಲತಾ ಗೆಲುವಿನ ಅಂತರ : 1,25,876

ಮತದಾರರು :

ಪುರುಷರು    : 8,71,490

ಮಹಿಳೆಯರು  :  8,97,031

ಒಟ್ಟು ಮತದಾರರು : 17,68,688

(ತೃತೀಯ ಲಿಂಗಿಗಳು : 167)

ಜಾತಿವಾರು ಮತದಾರರು :

ಒಕ್ಕಲಿಗ : 7,10,000

ಲಿಂಗಾಯಿತ : 1,44,000

ಎಸ್ಸಿ-ಎಸ್ಟಿ : 2,96,000

ಅಲ್ಪಸಂಖ್ಯಾತ : 1,08,000

ಕುರುಬ : 1,76,000

ಇತರರು : 2,53,291

ಜೆಡಿಎಸ್ಬಿಜೆಪಿ ಮೈತ್ರಿ ಪ್ಲಸ್

ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ, ಒಕ್ಕಲಿಗ ಮತಗಳ ಬಲ

ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಯಿಂದ ಒಗ್ಗಟ್ಟಿನ ಫೈಟ್​

ಕಳೆದ ಬಾರಿ ನಿಖಿಲ್ ಸೋಲಿನ ಬಳಿಕ ಜೆಡಿಎಸ್​ಗೆ ಪ್ರತಿಷ್ಠೆ

ಬಿಜೆಪಿಯ ದಿಗ್ಗಜರೆಲ್ಲ ಹೆಚ್​ಡಿಕೆ ಪರ ಗಟ್ಟಿಯಾಗಿ ನಿಂತಿರುವುದು

ಮೈತ್ರಿ ಹಿನ್ನೆಲೆ ಬಿಜೆಪಿಯ ಹಿಂದೂತ್ವದ ಮತಗಳೂ ಒಗ್ಗಟ್ಟು

ಕೆರಗೋಡು ಪ್ರಕರಣ ಬಳಿಕ ಹಿಂದೂತ್ವ ಮತಗಳ ಕ್ರೋಢಿಕರಣ

ಸುಮಲತಾ ಬೆಂಬಲದಿಂದ ಅಂಬರೀಶ್​ ಅಭಿಮಾನಿಗಳ ಬೆಂಬಲ

ಜೆಡಿಎಸ್ಬಿಜೆಪಿ ಮೈತ್ರಿ ಮೈನಸ್ :

ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಪುತ್ರ ಸೋತಿರುವುದು

ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾರ್ಯಕರ್ತರ ಗೊಂದಲ

8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರು

ಕಾಂಗ್ರೆಸ್ ಪ್ಲಸ್ :

ವಿವಾದ ರಹಿತ ಹೊಸ ಅಭ್ಯರ್ಥಿ ಕಣಕ್ಕಿಳಿಸಿ ಅಬ್ಬರದ ಪ್ರಚಾರ

ಹೊಸ ಅಭ್ಯರ್ಥಿ ಪರವಾಗಿ ಮಂಡ್ಯದ ನಾಯಕರೆಲ್ಲಾ ಒಗ್ಗಟ್ಟು

ಅಖಾಡದಲ್ಲಿ ಸ್ಟಾರ್​ ಚಂದ್ರು ಬಿರುಸಿನ ಪ್ರಚಾರ ಕೈಗೊಂಡಿರುವುದು  —

ಡಿ.ಕೆ. ಶಿವಕುಮಾರ್​ ಮಂಡ್ಯ ಪ್ರತಿಷ್ಠೆಯಾಗಿ ಪರಿಗಣಿಸಿರುವುದು

ಅಸೆಂಬ್ಲಿ ಎಲೆಕ್ಷನ್​​ನಲ್ಲಿ ಮಂಡ್ಯದಲ್ಲಿ ಭರ್ಜರಿ ಜಯಭೇರಿ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದು ಪ್ಲಸ್​

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯಿಂದ ವಿಶ್ವಾಸ

ಕಾಂಗ್ರೆಸ್ ಮೈನಸ್ :

ಅಭ್ಯರ್ಥಿ ಸ್ಟಾರ್​ ಚಂದ್ರು ಬಗ್ಗೆ ಕ್ಷೇತ್ರದ ಜನರಿಗೆ ಪರಿಚಯ ಇಲ್ಲ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ

ಮೈತ್ರಿ ಅಭ್ಯರ್ಥಿ ಪರ ಮೋದಿ ಅಲೆಯನ್ನು ತಡೆಯುವ ಸವಾಲು

ಗ್ಯಾರಂಟಿ ಯೋಜನೆ ನೆಪದಲ್ಲಿ ಅಭಿವೃದ್ದಿ ಕೆಲಸಗಳು ಸ್ಥಗಿತ

ಪವರ್ ಟಿವಿ ಸರ್ವೆ ರಿಪೋರ್ಟ್​ :

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಜೆಡಿಎಸ್ ರಣೋತ್ಸಾಹಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​? ಮಂಡ್ಯದಲ್ಲಿ ಶಾಕ್ ನೀಡ್ತಾರಾ ಕಾಂಗ್ರೆಸ್​ನ ಸ್ಟಾರ್ ಚಂದ್ರು? ಗೆಲುವಿನ ಪತಾಕೆ ಹಾರಿಸುತ್ತಾರಾ H.D.ಕುಮಾರಸ್ವಾಮಿ? ಇವೆಲ್ಲದಕ್ಕು ಉತ್ತರ ಇಲ್ಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಟ್ಟು ಕರೆಗಳು – 15916

ಪುರುಷ ಮತದಾರರಿಂದ 15064, ಮಹಿಳಾ ಮತದಾರರಿಂದ 852 ಕರೆಗಳು

ಜೆಡಿಎಸ್ ಅಭ್ಯರ್ಥಿಗೆ ಮತಗಳು – 8105, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 7811

ಮಂಡ್ಯ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಜೆಡಿಎಸ್​​ಗೆ ಬಂದ ಶೇಕಡಾವಾರು ಮತಗಳು – 51%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 49%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಜೆಡಿಎಸ್​​​​​​ಗೆ 294 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

​​ಮಂಡ್ಯ ಲೋಕಸಭಾ ಫೈಟ್​ನಲ್ಲಿ ಸಮಬಲದ ಹೋರಾಟ

ಜೆಡಿಎಸ್​​-ಕಾಂಗ್ರೆಸ್​ ಹಣಾಹಣಿಯಲ್ಲಿ ಜೆಡಿಎಸ್​​​​ಗೆ ಅಲ್ಪ ಮುನ್ನಡೆ

ಒಕ್ಕಲಿಗರ ಕೋಟೆಯಲ್ಲಿ ಕಾಂಗ್ರೆಸ್​-ಜೆಡಿಎಸ್ ಸಮಬಲದ ಹೋರಾಟ

ಗ್ಯಾರಂಟಿ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರ ಕೃಪೆ

ತಮ್ಮ ವರ್ಚಸ್ಸು, ಆಡಳಿತದ ದೆಸೆಯಿಂದ ಹೆಚ್​ಡಿಕೆ ಪರ ಒಲವು

ಜಿದ್ದಾಜಿದ್ದಿನ ಎಲೆಕ್ಷನ್​​ ಫೈಟ್​ನಲ್ಲಿ ಜೆಡಿಎಸ್​​​​ಗೆ ತುಸು ಮುನ್ನಡೆ

ಇದು ಪವರ್ ಸರ್ವೆಯಲ್ಲಿ ಮಂಡ್ಯ ಮತದಾರರು ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES