Tuesday, September 17, 2024

ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಆಯ್ಕೆ: ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ ವಿದ್ಯಾನಗರ ಬೆಂಗಳೂರು ಇಲ್ಲಿನ ತರಬೇತಿ ಕೇಂದ್ರಕ್ಕೆ ಅಥ್ಲೆಟಿಕ್ಸ್ ಹಾಗೂ ಈಜು ಕ್ರೀಡೆಗಳಲ್ಲಿ ಪ್ರತಿಭಾನ್ವಿತರಾಗಿರುವ ಹಾಗೂ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಲುವಾಗಿ ಜಯ ಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ಕ್ರೀಡಾಶಾಲೆ, ವಿದ್ಯಾನಗರ, ಬೆಂಗಳೂರು ಕೇಂದ್ರಗಳಲ್ಲಿ ಏಪ್ರಿಲ್ 15 ಮತ್ತು 16 ರಂದು ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.

ಭಾಗವಹಿಸಲು ಅರ್ಹತೆಗಳು.

2024ರ ಜುಲೈ 1ಕ್ಕೆ 14 ವರ್ಷ ಮೇಲ್ಪಟ್ಟವರಾಗಿದ್ದು 23 ವರ್ಷ ಒಳಪಟ್ಟವರಾಗಿರಬೇಕು. ಪ್ರಸಕ್ತ 2023 – 24ನೇ ಸಾಲಿನಲ್ಲಿ 10ನೇ ತರಗತಿಯನ್ನು ಅಭ್ಯಾಸಿಸುತ್ತಿದ್ದು, ಶೈಕ್ಷಣಿಕ ವರ್ಷ 2024 – 25ನೇ ಸಾಲಿನ ಪ್ರಥಮ ಪದವಿಪೂರ್ವ ಕೊರ್ಸ್ (1st PUC) ಗೆ ಪ್ರವೇಶ ಪಡೆಯುವ ಅರ್ಹತೆ ಉಳ್ಳವರಾಗಿರಬೇಕು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯ ಕ್ರೀಡಾಶಾಲೆ / ನಿಲಯ ಯೋಜನೆಯಲ್ಲಿ ಆಯ್ಕೆಗೊಂಡಿರುವ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ. ಈ ಆಯ್ಕೆ ಪ್ರಕ್ರಿಯೆ ದಿನದಂದು ಸಂಘಟಿಸಲಾಗುವ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.

ಜನ್ಮದಿನಾಂಕದ ದಾಖಲಾತಿಗಾಗಿ ಜನನ ಪ್ರಮಾಣ ಪತ್ರ ಅಥವಾ ಶೈಕ್ಷಣಿಕ ಶಾಲಾಮುಖ್ಯಸ್ಥರಿಂದ ಧೃಡಿಕರಿಸಲ್ಪಟ್ಟ ಹಾಗೂ 10 ನೇ ತರಗತಿ ತೇರ್ಗಡೆಗೊಂಡಿರುವ ಅಂಕಪಟ್ಟಿಯ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಕ್ರೀಡೆಗಳಲ್ಲಿ ಸಾಧಿಸಲಾಗಿರುವ ಸಾಧನೆ ಹಾಗೂ ಸಾಮರ್ಥ್ಯದ ಪ್ರಮಾಣ ಪತ್ರದ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನೂ ಓದಿ: ವಿರೋಧಿಗಳು ಮೋದಿಯನ್ನು ಟೀಕಿಸಿದಾಗಲೆಲ್ಲಾ ಅವರ ಜನಪ್ರಿಯತೆ ಹೆಚ್ಚಾಗಿದೆ: ಬೊಮ್ಮಾಯಿ

ಆರೋಗ್ಯ ಧೃಡೀಕರಣ ಹಾಗೂ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಸರ್ಕಾರಿ ವೈದ್ಯರಿಂದ ಧೃಡೀಕರಿಸಿದ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಇಲಾಖಾವತಿಯಿಂದ ಪರಿಶೀಲನಾ ತರಬೇತಿ ಶಿಬಿರವನ್ನು ಏರ್ಪಡಿಸಿ ಅರ್ಹತೆಗಳಿಸಿದ ಕ್ರೀಡಾಪಟುಗಳಿಗೆ ಪ್ರವೇಶವನ್ನು ನೀಡಲಾಗುವುದು.

ಉದ್ದೀಪನ ಮದ್ದು ಸೇವನೆಯಿಂದಾಗಿ ಅಮಾನತ್ತಿನ ಶಿಕ್ಷೆಗೆ ಒಳಪಟ್ಟಿರುವ ಕ್ರೀಡಾಪಟುಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಹಕ್ಕು ನಿರಾಕರಣ ನಿಯಮಗಳು :
ಆಯ್ಕೆಯ ಸಮಯದಲ್ಲಿ ಯಾವುದೇ ಗಾಯಗಳು, ಅನಾರೋಗ್ಯ ಯಾವುದೇ ಇತರ ಸಾವು ನೋವುಗಳು, ಶಾಶ್ವತ ಅಂಗವೈಕಲ್ಯ ಮತ್ತು ಜೀವಹಾನಿ ಸಂಭವಿಸಿದರೆ ಸಂಸ್ಥೆ ಅಥವಾ ಇಲಾಖೆ ಜವಾಬ್ದಾರಿಯುತವಾಗಿರುವುದಿಲ್ಲ. ಆಯ್ಕೆಗೆ ಹಾಜರಾಗುವ ಕ್ರೀಡಾಪಟುಗಳಿಗೆ ಯಾವುದೇ ದಿನ ಭತ್ಯೆ, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
ಆಯ್ಕೆಯ ಸಮಯದಲ್ಲಿ ಲಘು ಭೋಜನವನ್ನು ಮಾತ್ರ ನೀಡಲಾಗುತ್ತದೆ.
ಆಯ್ಕೆ, ಟ್ರಯಲ್ಸ್ ನಲ್ಲಿ ಫೆಡರೇಶನ್ನಿಂದ ಅನುಮೋದಿಸಲ್ಪಟ್ಟ ಮತ್ತು ಪ್ರಮಾಣೀಕೃತ ಕ್ರೀಡಾ ಸಾಮಗ್ರಿಗಳನ್ನು ಬಳಸಲಾಗುವುದು.

ಹೆಚ್ಚಿನ ವಿವರಗಳಿಗೆ ಜಯಲಕ್ಷ್ಮಿ.ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು 9980590960 / 9632778567, ಕಛೇರಿಯ ದೂರವಾಣಿ ಸಂಖ್ಯೆ 080-29787443 ಗೆ ಸಂಪರ್ಕಿಸುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES