Saturday, May 4, 2024

ನಿಮಗೆ ಉತ್ತಮ ನಿದ್ರೆ ಬರ್ತಿಲ್ವಾ? ರಾತ್ರಿ ಸುಖವಾದ ನಿದ್ರೆಗೆ ಈ ಟಿಪ್ಸ್ ಫಾಲೋ ಮಾಡಿ ಸಾಕು

ಬೆಂಗಳೂರು : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಆದರೆ, ಅನೇಕ ಜನರು ನಿದ್ರಿಸಲು ಕಷ್ಟಪಡುತ್ತಾರೆ. ಇದರಿಂದಾಗಿ ದಿನವಿಡೀ ಆಯಾಸ ಉಂಟಾಗುತ್ತದೆ.

ತಂತ್ರಜ್ಞಾನ ಜಗತ್ತಿನಲ್ಲಿ ಹಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಂತಹವರಿಗೆ ವ್ಯಾಯಾಮವೇ ಉತ್ತಮ ಪರಿಹಾರ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಯುರೋಪಿಯನ್ ಸಂಶೋಧಕರು ವಾರದಲ್ಲಿ 2 ಅಥವಾ 3 ಬಾರಿ 1 ಗಂಟೆ ವ್ಯಾಯಾಮವನ್ನು ಮಾಡಿದರೆ ಸಾಕು ಎಂದು ನಿರ್ಧರಿಸಿದ್ದಾರೆ. ಸಂಶೋಧನೆಯನ್ನು 4,399 ಜನರ ಮೇಲೆ ನಡೆಸಿದ್ದಾರೆ. ದೈಹಿಕವಾಗಿ ಕ್ರೀಯಾಶೀಲರಾಗಿರುವ ಜನರು ನಿದ್ರಾಹೀನತೆಯಂತಹ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.

ಸುಖ ನಿದ್ರೆಗೆ ಟಿಪ್ಸ್​ ಫಾಲೋ ಮಾಡಿ

  • ಉತ್ತಮ ನಿದ್ರೆಯ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಯಾವಾಗ ನಿದ್ರಿಸಬೇಕು ಮತ್ತು ಎಚ್ಚರಗೊಳ್ಳಬೇಕು ಎಂಬುದನ್ನು ಬರೆದಿಟ್ಟುಕೊಳ್ಳಿ.
  • ನಿದ್ರೆಗಾಗಿ 8 ಗಂಟೆಗಳಿಗಿಂತ ಹೆಚ್ಚು ಸಮಯ ಮೀಸಲಿಡಿ. ಆರೋಗ್ಯವಂತ ವಯಸ್ಕರು ಕನಿಷ್ಠ 7 ಗಂಟೆ ನಿದ್ರೆ ಮಾಡಿ.
  • ಮಲಗುವ ವಿಶ್ರಾಂತಿ ಸಮಯದ ದಿನಚರಿ ರಚಿಸಿ. ಪುಸ್ತಕವನ್ನು ಓದುವುದು, ಬೆಚ್ಚಗಿನ ಸ್ನಾನ ಮಾಡುವುದು ಅಥವಾ ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಮಲಗುವ ಮೊದಲು ಬಾಳೆಹಣ್ಣು ಸೇವಿಸಿ.
  • ಮಲಗುವ ರೂಮ್​ನಲ್ಲಿ ಆರಾಮದಾಯಕ, ಶಾಂತ ಮತ್ತು ತಂಪಾಗಿಡಿ. ಆರಾಮದಾಯಕವಾದ ಹಾಸಿಗೆ ಮತ್ತು ದಿಂಬುಗಳನ್ನು ಬಳಸಿ. ಕೋಣೆಯನ್ನು ಚೆನ್ನಾಗಿ ಗಾಳಿ ಆಡುವಂತೆ ಇರಿಸಿ.
  • ಒತ್ತಡ ಮತ್ತು ಆತಂಕ ನಿದ್ರಾ ಭಂಗಕ್ಕೆ ಕಾರಣ. ಮಲಗುವ ಮುನ್ನ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಉಸಿರಾಟದ ವ್ಯಾಯಾಮ ಮಾಡಿ. ಒತ್ತಡ ಕಡಿಮೆ ಮಾಡುವ ತಂತ್ರಗಳನ್ನು ಅಭ್ಯಾಸ ಮಾಡಿ.
  • ನಿತ್ಯ ಮುಂಜಾನೆ ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿಗೆ ಮೈಯನ್ನು ಒಡ್ಡುವುದರಿಂದ ರಾತ್ರಿ ಚೆನ್ನಾಗಿ ಬರುತ್ತದೆ.

RELATED ARTICLES

Related Articles

TRENDING ARTICLES