Thursday, September 19, 2024

SSLC ವಿದ್ಯಾರ್ಥಿಗಳು ಕಾಪಿ ಮಾಡಿದ್ರೆ ತಪ್ಪೇನು?: ಮಾಜಿ ಶಿಕ್ಷಣ ಸಚಿವ ಎನ್​ ಮಹೇಶ್​

ಚಾಮರಾಜನಗರ: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಏಕೆ ಎಂದು ಮಾಜಿ ಶಿಕ್ಷಣ ಸಚಿವ ಎನ್​ ಮಹೇಶ್​​ ಅವರು ಪ್ರಶ್ನೆ ಮಾಡಿದ್ದಾರೆ.

ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವೇಳೆ ಮಾತಾಡಿದ ಅವರು, ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಏಕೆ ವಿದ್ಯಾರ್ಥಿಗಳು ಏನು ಕಳ್ಳರೇ, ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ ಎಂದರು.

ಅಲ್ಲದೇ ಕಷ್ಟ ಪಟ್ಟು ಓದಿ ಬಂದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭಯದ ವಾತಾವರಣವಿದೆ. ಕಾಪಿ ಹೊಡೆದರೆ ಏನು ತಪ್ಪು? ಅದು ಮಹಾ ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.

ನಾನು 1 ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸಕ್ತ ನೋಡಿಕೊಂಡು ಬರೆಯುವಂತೆ ಮಾಡುತ್ತಿದ್ದೆ

ಸದ್ಯ ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೇ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ರೀತಿ ಜಾರಿಗೆ ತರುತ್ತಿದ್ದೆ. ವಿದ್ಯಾರ್ಥಿಗಳು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ. ಇಲ್ಲಂದ್ರೆ ಎಲ್ಲಿ ಬರೆಯುತ್ತಾರೆ ಅದಕ್ಕೆ ಸಿಸಿ ಕ್ಯಾಮರಾ ಬೇಕೆ? ಎಂದು ಮಾಜಿ ಸಚಿವ ಎನ್​ ಮಹೇಶ್ ಅವರು ಮಾತಾಡಿದ್ದಾರೆ

RELATED ARTICLES

Related Articles

TRENDING ARTICLES