Tuesday, September 17, 2024

ಸುಂದರಿಯರ ಜೊತೆ ಸರಸ ಬಿ ಟೌನ್​ನ ಸುಖಪುರುಷ!

ಫಿಲ್ಮಿ ಡೆಸ್ಕ್​: ಬಾಲಿವುಡ್​ನ ಚೆಂದದ ನಟಿಯರ ಜೊತೆ ಆತ ಸಲಿಗೆಯಿಂದ ಪೋಸ್ ಕೊಡ್ತಾನೆ. ಸೆಲೆಬ್ರಿಟಿಗಳ ಜೊತೆಗೆ ಪಾರ್ಟಿ ಮಾಡ್ತಾನೆ. ಇತ್ತೀಚಿಗೆ ಯಾವುದೇ  ಬಾಲಿವುಡ್ ಇವೆಂಟ್​​, ಪಾರ್ಟಿಗಳಿಗೆ ಹೋದ್ರೂ ಆತ ಇದ್ದೇ ಇರ್ತಾನೆ. ಸೋಷಿಯಲ್ ಮಿಡಿಯಾ ತುಂಬಾ ಆತ ಸೆಲೆಬ್ರಿಟಿಗಳ ಜೊತೆಗಿರುವ ನೂರಾರು ಫೋಟೋಗಳಿವೆ.  ಇಷ್ಟಕ್ಕೂ ಯಾರಿವನು ಅಂತ ಜನರೆಲ್ಲಾ ತಲೆಕೆಡಿಸಿಕೊಂಡಿದ್ದಾರೆ. ಹೀಗೆ ಎಲ್ಲರ ತಲೆಗೂ ಹುಳ ಬಿಟ್ಟು ಸೋಷಿಯಲ್ ಮಿಡಿಯಾ ಸ್ಟಾರ್ ಆಗಿರೋ ಆತನ ಹೆಸರೇ ಓರಿ.. ಯಾರೀ ಓರಿ ಅಂತೀರಾ.. ಇಲ್ಲಿದೆ ಆ ಕುರಿತ ಇನ್​ಟ್ರೆಸ್ಟಿಂಗ್ ಸ್ಟೋರಿ.

ಯೆಸ್, ಇತ್ತೀಚಿಗೆ ಈ ಓರಿ ಅನ್ನೋ ವಿಚಿತ್ರ ವ್ಯಕ್ತಿಯನ್ನ ನೀವು ಸೋಷಿಯಲ್ ಮಿಡಿಯಾದಲ್ಲಿ ಪದೇ ಪದೇ ನೋಡಿರ್ತೀರಿ. ಜಾಹ್ನವಿ ಕಪೂರ್, ಅನನ್ಯಾ ಪಾಂಡೇ, ಸಾರಾ ಅಲಿ ಖಾನ್​ ಸೇರಿದಂತೆ ಬಾಲಿವುಡ್​​ನ ಚೆಂದುಳ್ಳಿ ಚೆಲುವೆಯರ ಜೊತೆ ಈತ ಸಿಕ್ಕಾಪಟ್ಟೆ ಸಲುಗೆಯಿಂದ ಇರೋ ನೂರಾರು ಪೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ಈತನ ಹೆಸರು ಓರಿ.. ಈತನ ಹೆಸರೂ ವಿಚಿತ್ರ.. ನೋಡೋದಕ್ಕೂ ವಿಚಿತ್ರ ಪ್ರಾಣಿ. ಗಂಡಸರು ಹೆಂಗಸರು ಅಂತ ಬೇಧ ಭಾವ ಎಣಿಸದೇ ಎಲ್ಲರ ಎದೆ ಮೇಲೂ ಕೈಯಿಟ್ಟು ಪೋಸ್ ಕೊಡ್ತಾನೆ ಈ ಓರಿ. ಈತನ ಈ ಸಿಗ್ನೇಚರ್ ಸ್ಟೈಲ್ ಫೋಟೋಗಳು ಸಖತ್ ಫೇಮಸ್. ಬಾಲಿವುಡ್​ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಈತ ಆಪ್ತ. ಎಲ್ಲರೂ ಇವನ ಜೊತೆ ಸಲುಗೆಯಿಂದಲೇ ಪೋಸ್ ಕೊಡ್ತಾರೆ.

ಇದನ್ನೂ ಓದಿ: ಐಪಿಎಲ್​ ಆರಂಭಕ್ಕೂ ಮುನ್ನ ಅಯೋಧ್ಯೆ ರಾಮನ ದರ್ಶನ ಪಡೆದ ದಕ್ಷಿಣ ಆಫ್ರಿಕಾ ಸ್ಪಿನ್ನರ್​!

ಆರಂಭದಲ್ಲಿ ಈತ ಮತ್ತು ಜಾಹ್ನವಿ ಕಪೂರ್ ಜೊತೆಗಿರೋ ಫೋಟೋಗಳು ವೈರಲ್ ಆಗಿದ್ವು. ಇವನೇನಾದ್ರೂ ಜಾಹ್ನವಿ ಬಾಯ್ ಫ್ರೆಂಡ್ ಇರಬಹುದಾ ಅಂತ ಹುಡುಗರು ಕಂಗಾಲಾಗಿದ್ರು. ಆದ್ರೆ ಜಾಹ್ನವಿಗೆ ಇಷ್ಟು ಕೆಟ್ಟ ಟೇಸ್ಟ್ ಇರಲಿಕ್ಕಿಲ್ಲ ಅಂತ ತಾವೇ ಸಮಾಧಾನನೂ ಮಾಡಿಕೊಂಡಿದ್ರು.

ಜಸ್ಟ್ ಜಾಹ್ನವಿ ಅಲ್ಲ ಮುಂದೆ ಈತ ಎಲ್ಲಾ ಸೆಲೆಬ್ರಿಟಿಗಳ ಜೊತೆಗೂ ಈತ ಕ್ಲೋಸ್ ಆಗಿರೋ ಫೋಟೋಗಳನ್ನ ಹಾಕ್ತಾ ಇದ್ದ. ಇತ್ತೀಚಿಗೆ ಯಾವುದೇ ಬಾಲಿವುಡ್​ನ ಹೈಪ್ರೊಫೈಲ್ ಪಾರ್ಟಿಗೆ ಹೋದ್ರೂ ಅಲ್ಲಿ ಓರಿ ಇದ್ದೇ ಇರ್ತಾನೆ.

ಯೆಸ್, ಈತ ಏನು ಕೆಲಸ ಮಾಡ್ತಾನೇ ಅಂತ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ. ಈ ರೀತಿ ಮಸ್ತ್ ಆಗಿ ರೆಡಿಯಾಗಿ ಪಾರ್ಟಿಗಳನ್ನ ಅಟೆಂಡ್ ಮಾಡೋದೇ ಈತನ ಫುಲ್ ಟೈಮ್ ಕೆಲಸ. ಇವೆಂಟ್​​ಗಳಲ್ಲಿ ಭಾಗಿಯಾಗಿ ಪೋಟೋಗಳಿಗೆ ಪೋಸ್ ಕೊಡೋದಕ್ಕೆ ಈತನಿಗೆ ಹಣ ಕೊಡ್ತಾರೆ. ನಂಬ್ತಿರೋ ಬಿಡ್ತಿರೋ ಸಿರಿವಂತರ ಮದುವೆಗಳಲ್ಲಿ ಬಂದು ಪೋಟೋಗೆ ಪೋಸ್ ಕೊಡಲಿಕ್ಕೆ ಈತ 30 ಲಕ್ಷ ಚಾರ್ಜ್ ಮಾಡ್ತಾನೆ.

ಈತ ಎದೆ ಮೇಲೆ ಕೈಯಿರಿಸಿ ಫೋಟೋಗೆ ಪೋಸ್ ಕೊಟ್ರೆ ಲಕ್ಷ ಲಕ್ಷ ರೂಪಾಯಿ ಸಿಕ್ಕುತ್ತೆ. ಇವನ ಜೊತೆ ಫೋಟೋ ತೆಗೆಸಿಕೊಳ್ಳೋದಕ್ಕೆ ಸೆಲೆಬ್ರಿಟಿಗಳು ಕೂಡ ಮುಗಿಬೀಳ್ತಾರೆ. ಈತ ಯಾವೆಲ್ಲಾ ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಅಂತ ನೀವೇ ಒಮ್ಮೆ ನೋಡಿ ಬಿಡಿ.

ಬಾಲಿವುಡ್‌ ನಟಿಯರಾದ ಕರೀನಾ, ಕರೀಷ್ಮಾ, ಇಬ್ರಾಹಿಂ ಅಲಿಖಾನ್, ವರುಣ್ ಧವನ್, ದೀಪಿಕಾ ಪಡುಕೋಣೆ, ಶಾರೂಕ್ ಪುತ್ರಿ ಸುಹಾನಾ, ಅಲಿಯಾ ಭಟ್, ಕರಣ್ ಜೋಹರ್, ಖುಷಿ ಕಪೂರ್, ಅನನ್ಯಾ ಪಾಂಡೆ ಹೀಗೆ ಓರಿ ಜೊತೆ ಫೋಟೋ ತೆಗೆಸಿಕೊಂಡು ಮುದ್ದಾಡುವ ಬಾಲಿವುಡ್ ನಟ ನಟಿಯರ ದೊಡ್ಡ ಲಿಸ್ಟೇ ಇದೆ.

ಅದ್ರಲ್ಲೂ ಈ ಓರಿ ಫೋಟೋಗೆ ಫೋಸ್ ನೀಡುವ ಸ್ಟೈಲೇ ಒಂಥರಾ ವಿಚಿತ್ರ, ಬಹುತೇಕ ಫೋಟೋಗಳಲ್ಲಿ ಆತ ನಟಿಯರ ಎದೆ ಮೇಲೆ ಕೈ ಇಡ್ತಾನೆ ಅಥವಾ ತೊಡೆ ಮೇಲೆ ಕೈ ಇಡ್ತಾನೆ. ನಟಿಯರು ಕೂಡ ಯಾವುದೇ ಮುಜುಗರವಿಲ್ಲದೇ ಅದೇ ರೀತಿ ಫೋಟೋ ತೆಗೆಸಿಕೊಳ್ಳುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ಬ್ಯಾಂಕ್‌ ಖಾತೆಗಳು ಸೀಜ್ : ಬಿಜೆಪಿ ವಿರುದ್ದ ಸೋನಿಯಾ ಗಾಂಧಿ ಕಿಡಿ

ಇದು ಬಹುತೇಕ ತಾರೆಯರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಈತನ ಫೋಟೋಗಳನ್ನ ಪಾಪರಾಜಿಗಳು ಪೋಸ್ಟ್ ಮಾಡಿದಾಗಲೆಲ್ಲಾ ಅನೇಕರು ಈತ ಯಾರು ಅಂತ ಕುತೂಹಲ ವ್ಯಕ್ತಪಡಿಸ್ತಾರೆ. ಜೊತೆಗೆ ಯಾಕೆ ಈತ ಈ ರೀತಿ ವಿಚಿತ್ರವಾಗಿ ಪೋಸ್ ನೀಡ್ತಾನೆ ಅಂತ ಪ್ರಶ್ನೆ ಮಾಡ್ತಾರೆ.

ಹೌದು ಸೋಷಿಯಲ್ ಮಿಡಿಯಾದಲ್ಲಿ ಈ ಓರಿ ಅದ್ಯಾಪರಿ ಫೇಮಸ್ ಆದ ಅಂದ್ರೆ ಬಿಗ್ ಬಾಸ್ ಸೀಸನ್ 17 ಹಿಂದಿ ನಲ್ಲಿ ವೈಲ್ಡ್ ಕಾರ್ಡ್​ ಸ್ಪರ್ದಿಯಾಗಿ  ಈತನನ್ನ ಕರೆಸಲಾಗಿತ್ತು. ವೇದಿಕೆ ಮೇಲೆ ಇವನ ಕಥೆ ಕೇಳಿದ ಸಲ್ಲುಮಿಯಾನೇ ಒಂದು ಕ್ಷಣ ದಂಗಾಗಿ ಹೋಗಿದ್ರು.

ಇನ್ನೂ ಕರಣ್ ಜೋಹರ್ ಈತನನ್ನ ಕಾಫಿ ವಿತ್ ಕರಣ್ ಶೋಗೂ ಕರೆಸಿದ್ರು. ಯಾರಪ್ಪಾ ನೀನು ಓರಿ ಅಂತ ಕೇಳಿದ್ರು. ಅಸಲಿಗೆ ಓರಿ ನ್ಯೂಯಾರ್ಕ್​​ನಲ್ಲಿ ಓದಿದ್ದು, ಸಾರಾ ಅಲಿಖಾನ್​ಳ ಸಹಪಾಠಿ. ಬಹಳಷ್ಟು ಬಾಲಿವುಡ್ ತಾರೆಯರ ಮಕ್ಕಳು , ಸೆಲೆಬ್ರಿಟಿ ಕಿಡ್​​ಗಳು ಈತನಿಗೆ ಪರಿಚಿತರು. ಸೋ ಇವನನ್ನ ಎಲ್ಲರೂ ಪಾರ್ಟಿಗೆ ಆಹ್ವಾನಿಸ್ತಾರೆ. ಒಳ್ಳೆ ಡ್ರೆಸ್ ಸೆನ್ಸ್, ಹಾಸ್ಯಪ್ರಜ್ಞೆ ಇರೋ ಈತನನ್ನ ಜೊತೆಗಿಟ್ಟುಕೊಳ್ಳೋದಕ್ಕೆ ಬಯಸ್ತಾರೆ.

ಇನ್ನೂ 5 ಜನ ಮ್ಯಾನೇಜರ್ಸ್ ಇಟ್ಟುಕೊಂಡು ಈ ಓರಿ ಏನ್ ಮಾಡ್ತಾನೆ ಅಂತ ಕೇಳ್ತಿರಾ. ಈತ ಹೇಳೋ ಪ್ರಕಾರ ಈತನ ಬಿಜಿನೆಸ್ ಇವೆಯಂತೆ. ರಿಲಯನ್ಸ್​​ನಲ್ಲಿ ಮ್ಯಾನೇಜರ್ ಅಂತೆ. ಒಂದೊಂದು ಸಂದರ್ಶನದಲ್ಲಿ ಒಂದೊಂದು ಕಥೆ ಹೇಳೋ ಈತ,  ಸತ್ಯವೇ  ಆಗಲಿ ಸುಳ್ಳೇ ಆಗಲಿ ತಲೆ ಮೇಲೆ ಹೊಡೆದಂತೆ ಹೇಳ್ತಾನೆ.

ಓರಿ ಫೇಮಸ್ ಆಗಲಿಕ್ಕೆ ಶುರುವಾದ ಮೇಲೆ ಈತನ ಮೇಲೆ ಅನೇಕರು ಅನೇಕ ತರಹದ ಆರೋಪ ಮಾಡಿದ್ರು. ಈತ ಸಲಿಂಗ ಕಾಮಿ ಅಂತ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಟೀಸ್ ಮಾಡಿದ್ರು. ಅದಕ್ಕೆ ಖಡಕ್ ಉತ್ತರ ಕೊಟ್ಟ ಓರಿ ನಾನು ಸಲಿಂಗಿ ಅಲ್ಲವೇ ಅಲ್ಲ. ಆದ್ರೆ ಸಲಿಂಗಿಗಳ ಬಗ್ಗೆ ತಮಾಷೆ ಮಾಡಬೇಡಿ ಅಂದಿದ್ದ.

ಇನ್ನೂ ಈತನ ಬಗ್ಗೆ ಇನ್ನೊಂದು ದೊಡ್ಡ ಆಪಾದನೆಯೂ ಕೇಳಿಬಂತು. ಓರಿ ಒಬ್ಬ ಡ್ರಗ್ ಪೆಡ್ಲರ್. ಬಾಲಿವುಡ್ ಸೆಲೆಬ್ರಿಟಿಗಳ ಪಾರ್ಟಿಗಳಿಗೆ ಈತನೇ ಡ್ರಗ್ಸ್ ಸಪ್ಲೈ ಮಾಡ್ತಾನೆ, ಅದಕ್ಕಂತ್ಲೇ ಇವನನ್ನ ಎಲ್ಲಾ ಸೆಲೆಬ್ರಿಟಿಗಳು ಅಪ್ಪಿ ಮುದ್ದಾಡ್ತಾರೆ ಅಂತ ಅನೇಕರು ಆಪಾದನೆ ಮಾಡ್ತಾ ಇದ್ದಾರೆ.

ಆದ್ರೆ ಈತನ ಮೇಲಿರೋ ಆಪಾದನೆಗಳಿಗೆ ಯಾವುದೇ ಪುರಾವೆಯಂತೂ ಸಿಕ್ಕಿಲ್ಲ. ಈತ ಪಾರ್ಟಿಗಳ ಮೇಲೆ ಪಾರ್ಟಿ ಮಾಡ್ತಾ ಸುಂದರಿಯರ ಜೊತೆಗೆ ಪೋಸ್ ಕೊಡ್ತಾ ಹುಡುಗರ ಹೊಟ್ಟೆ ಉರಿಸ್ತಾನೇ ಇದ್ದಾನೆ. ಪೋಟೋಗಳಿಗೆ ಪೋಸ್ ಕೊಡ್ತಾನೇ ಲಕ್ಷಾಂತರ ಸಂಪಾದಿಸ್ತಿರೋ ಓರಿ ಸದ್ಯಕ್ಕಂತೂ ಜನರ ಪಾಲಿನ ಹೊಸ ಅಚ್ಚರಿ.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES