Friday, September 20, 2024

ಬಿಎಸ್​ವೈ ವಿರುದ್ದ ಪೊಕ್ಸೋ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು : ಅಪ್ರಾಪ್ರ ಯುವತಿಗೆ ಮಾಜಿ ಸಿಎಂ ಬಿಎಸ್​ವೈ ವಿರುದ್ದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು ಪೊಕ್ಸೋ ಪ್ರಕರಣ ದಾಖಲಾಗಿದೆ, ಈ ಪ್ರಕರಣ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಅವರು, ನೆನ್ನೆ ರಾತ್ರಿ ಒಬ್ಬ ಮಹಿಳೆ ಸದಾಶಿವ ನಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​ ಯಡಿಯೂರಪ್ಪನವರ ವಿರುದ್ದ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣ ದಾಖಲಿದ್ದಾರೆ, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ: ಬಿಎಸ್​ವೈ ವಿರುದ್ದ ಪೋಕ್ಸೊ ಪ್ರಕರಣ ದಾಖಲು!

ದೂರು ನೀಡಿರುವ ಮಹಿಳೆಗೆ ಮಾನಸಿಕ ಅಸ್ವಸ್ತತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ, ಠಾಣೆಯಲ್ಲಿ ಕೈಬರಹದ ಪ್ರತಿ ಬದಲಿಗೆ ಟೈಪ್​ ಮಾಡಿರುವ ಪ್ರತಿಯನ್ನು ನೀಡಿದ್ದಾರೆ, ಇದು ಮಾಜಿ ಮುಖ್ಯಮಂತ್ರಿಗಳ ವಿರುದ್ದ ನೀಡಿರುವ ಪ್ರಕರಣವಾಗಿದೆ. ಜೊತೆಗೆ ಒಬ್ಬ ಮಹಿಳೆ ದೂರು ನೀಡಿರುವ ಕಾರಣ ಇದೊಂದು ಸೂಕ್ಷ ಪ್ರಕರಣವಾಗಿದೆ. ತನಿಖೆ ನಡೆದು ವರದಿ ಬಂದ ನಂತರವಷ್ಟೆ ಮಾಹಿತಿ ಬಹಿರಂಗ ಪಡಿಸಲಾಗುವುದು ಎಂದರು.

ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯವಿದ್ದರೇ ಮಹಿಳೆಯ ಕುಟುಂಬಕ್ಕೆ ಪೊಲೀಸರು ರಕ್ಷಣೆ ನೀಡಲಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೂ ಉದ್ದೇಶಪೂರ್ವಕವಾಗಿ ದೂರು ದಾಖಲಿಸಿದ್ದಾರಾ ಅಥವಾ ದುರುದ್ದೇಶ ಪೂರಕವಾಗಿದೆಯಾ ಎನ್ನುವುದರ ತನಿಖೆ ನಡೆಯಲಿದೆ. ತನಿಖೆ ನಂತರ ಆರೋಪ ಸಾಬೀತಾದರೇ ಕಾನೂನು ಪ್ರಕಾರ ಕ್ರಮಕ್ಕೆ ಸೂಚಿಸಲಾಗುವುದು ಎಂದು ಅವರ ಹೇಳಿದರು.

RELATED ARTICLES

Related Articles

TRENDING ARTICLES