Friday, September 20, 2024

ಗೋಬಿ, ಕಾಟನ್ ಕ್ಯಾಂಡಿ ಬ್ಯಾನ್​ ಬೆನ್ನಲ್ಲೇ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!

ಬೆಂಗಳೂರು: ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಈಗ ಕಬಾಬ್, ಪಾನಿಪುರಿಯನ್ನ ಟೆಸ್ಟ್​ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿ ಅಸುರಕ್ಷತೆಯನ್ನ ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ. ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಬಣ್ಣಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ.

ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಬಣ್ಣಗಳನ್ನು ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ.‌

RELATED ARTICLES

Related Articles

TRENDING ARTICLES