Friday, September 20, 2024

ಗೋಬಿ ಮಂಚೂರಿ ಬ್ಯಾನ್​ಗೆ ಹೋಟೆಲ್​ಗಳ ಸಂಘ ವಿರೋಧ!

ಬೆಂಗಳೂರು: ರಾಜ್ಯದಲ್ಲಿ ಗೋಬಿ ಕಾಟನ್​ ಕ್ಯಾಂಡಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳಿಗೆಬಣ್ಣಗಳನ್ನು ಸೇರಿಸುತ್ತಿರುವುದರಿಂದ ಇದು ಕ್ಯಾನ್ಸರ್​ಕಾರಕ ಎಂದು ಅಭಿಪ್ರಾಯಪಟ್ಟಿರುವ ಸರ್ಕಾರ ಗೋಬಿ ಮತ್ತು ಕಾಟನ್ ಕ್ಯಾಂಡಿ ಬ್ಯಾನ್​ ಮಾಡಿರುವುದು ಬೆಂಗಳೂರು ಬೃಹತ್​ ಬೆಂಗಳೂರು ಹೋಟೆಲ್​ಗಳ ಸಂಘ ವಿರೋಧ ವ್ಯಕ್ತಪಡಿಸಿದೆ.

ಫಾಸ್ಟ್​ ಫುಡ್​ಗಳನ್ನು ನಂಬಿಕೊಂಡು ರಾಜ್ಯದಲ್ಲಿ ಹಲವು ಜನರು ಜೀವನ ಸಾಗಿಸುತ್ತಿದ್ದಾರೆ. ಇದೀಗ ಸರ್ಕಾರ ಗೋಬಿ ಬ್ಯಾನ್​ ಮಾಡುವ ಮೂಲಕ ಗೋಬಿ ವ್ಯಾಪಾರಿಗಳಿಗೆ ಮತ್ತು ಗೋಬಿ ಪ್ರಿಯರಿಗೆ ಶಾಕ್​ ನೀಡಿದೆ. ಈ ಕುರಿತು ಬೃಹತ್ ಬೆಂಗಳೂರು ಹೋಟೆಲ್​ಗಳ ಸಂಘ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು 3 ವಿಶೇಷ ಯೋಗ, ಈ ರಾಶಿಗೆ ಒಲಿಯಲಿದ್ದಾಳೆ ಧನಲಕ್ಷ್ಮಿ

FSSAI Regulation ಪ್ರಕಾರ ಫುಟ್​ ಅಡಿಕ್ಟಿವ್ ಆಗಿ ನಾಲ್ಕು ಬಗೆಯ  ISI Standard ತಯಾರಿಸಿರುವ ಕೆಂಪು, ಹಸಿರು, ನೀಲಿ, ಹಳದಿ ಬಣ್ಣಗಳನ್ನು ಉಪಯೋಗಿಸುವಬಹುದೆಂದು ಮಾರ್ಗಸೂಚಿಯಿರುತ್ತದೆ. ಈ ಬಣ್ಣಗಳನ್ನು ಬಳಸಬಹುದು ಎಂದು ತಿಳಿಸಿದೆ. ಆದರೇ,  ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಇದಕ್ಕೆ ವಿರುದ್ಧವಾಗಿ ಹೊರಡಿಸಿರುವ ಮಾರ್ಗಸೂಚಿ ಸಮಂಜಸವಲ್ಲ. ಈ ರೀತಿ ಆವೈಜ್ಞಾನಿಕವಾದ ನಿರ್ಧಾರಗಳನ್ನ ತೆಗೆದುಕೊಳ್ಳುವ ಮೊದಲು ಇದಕ್ಕೆ ಸಂಬಂಧಪಟ್ಟ ತಯಾರಕರು ಹಾಗೂ ಉಪಯೋಗಿಸುವವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಇದರ ಬಗ್ಗೆ ಸರ್ಕಾರಕ್ಕೆ ವಿವರವಾಗಿ ತಿಳಿಯಪಡಿಸಿ. ಇದನ್ನು ಸರಿಪಡಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಚರ್ಚಿಸಲಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES