Monday, May 20, 2024

ದಿನ ಭವಿಷ್ಯ: ಇಂದು 3 ವಿಶೇಷ ಯೋಗ, ಈ ರಾಶಿಗೆ ಒಲಿಯಲಿದ್ದಾಳೆ ಧನಲಕ್ಷ್ಮಿ

2024 ಮಾರ್ಚ್ 12ರ ಮಂಗಳವಾರವಾದ ಇಂದು, ಚಂದ್ರನು ಮೀನ ರಾಶಿಯ ನಂತರ ಮೇಷ ರಾಶಿಗೆ ತೆರಳಲಿದ್ದಾನೆ. ಹಾಗೆಯೇ ಇಂದು ಮಾಘ ಮಾಸದ ಶುಕ್ಲ ಪಕ್ಷದ ಎರಡನೇ ದಿನವಾಗಿದ್ದು ಈ ದಿನ ಶುಕ್ಲ ಯೋಗ, ಬ್ರಹ್ಮ ಯೋಗ, ರವಿಯೋಗ ಮತ್ತು ರೇವತಿ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ವೃಷಭ: ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧರಾಗಿ. ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತರು ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ.

ಮಿಥುನ: ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ. ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಜನರ ಸಹಕಾರ ಸಿಗಲಿದೆ. ನಿಮ್ಮ ಕೋಪದಿಂದ ಇತರರ ಮೇಲೆ ಒತ್ತಡ ಹೇರುವುದು ಬೇಡ.

ಕಟಕ: ಹಣದ ಅಗತ್ಯವಿರುತ್ತದೆ, ಆದ್ದರಿಂದ ಇಂದು ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ.

ಸಿಂಹ: ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದುವ ಸಾಧ್ಯತೆ ಇದೆ. ಕುಟುಂಬದ ಬೆಂಬಲ ಸಿಗಲಿದೆ. ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ.

ಇದನ್ನೂ ಓದಿ: Byadagi Market: ಬ್ಯಾಡಗಿ ಬೆಲೆ ಕುಸಿತ: APMC ಅಧ್ಯಕ್ಷರ ಕಾರಿಗೆ ಬೆಂಕಿ

ಕನ್ಯಾ: ಹತಾಶೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಭರವಸೆಯ ಅವಕಾಶ ಇರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ.

ತುಲಾ: ಅನಿವಾರ್ಯ ಕಾರಣದಿಂದ ಖರ್ಚು ಹೆಚ್ಚಾಗಲಿದೆ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯ ವರ್ತನೆ ವೃತ್ತಿಪರ ಸಂಬಂಧಗಳಿಗೆ ತೊಂದರೆಯನ್ನುಂಟು ಮಾಡಬಹುದು. ಉದ್ಯೋಗಿಗಳಿಗೆ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.

ವೃಶ್ಚಿಕ: ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಜವಾಗಿಯೂ ಅದ್ಭುತ ಮತ್ತು ಸೃಜನಶೀಲವಾಗಿರುವಂತಹ ಆಲೋಚನೆಗಳು ಬರಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ.

ಧನಸ್ಸು: ಒತ್ತಡದ ವಾತಾವರಣದಿಂದ ಹೊರ ಬರಲು ಧ್ಯಾನ, ಯೋಗ ಮಾಡಿ. ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು. ನೀವು ಈ ಸಲಹೆಯನ್ನು ಅನುಸರಿಸಿದರೆ, ನೀವು ಖಂಡಿತವಾಗಿಯೂ ಹಣವನ್ನು ಗಳಿಸುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ವಿರಾಮದ ವಾತಾವರಣವಿದು.

ಮಕರ: ಧಾರ್ಮಿಕ ಭಾವನೆ ಉದ್ಭವಿಸಿ, ದೈವಿಕ ಜ್ಞಾನವನ್ನು ಪಡೆಯಲು ನೀವು ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡುತ್ತವೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಹೊಸ ಉತ್ಸಾಹ ಇರಲಿದೆ.

ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣ ಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ.

ಮೀನ: ಉದ್ಯೋಗಿಗಳ ಅನುಮಾನದಿಂದ ಕಾರ್ಯದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬಂದಾವು. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ.ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ.

RELATED ARTICLES

Related Articles

TRENDING ARTICLES