Friday, September 20, 2024

ಅಬ್ಬಬ್ಬಾ..! ಅನಂತ್ ಅಂಬಾನಿ & ರಾಧಿಕಾ ಮರ್ಚೆಂಟ್ ಮದುವೆಗೆ 1,000 ಕೋಟಿ ವೆಚ್ಚ

ಬೆಂಗಳೂರು : ಅಬ್ಬಬ್ಬಾ.. ಇದೇನು ಮದುವೆ ಮನೆನಾ? ಅಥವಾ ಸ್ವರ್ಗವೇ ಧರೆಗಿಳಿದಿದ್ಯೋ? ಅಷ್ಟಕ್ಕೂ ಈ ವೈಭವದ ಮದುವೆ ದಿಬ್ಬಣಕ್ಕೆ ಎಷ್ಟು ಖರ್ಚು ಗೊತ್ತಾ? ಈ ವಿಷಯ ತಿಳಿದ್ರೆ ಒಮ್ಮೆಲೇ ನಿಮ್ಮ ಕೈ ಬಾಯಿ ಮೇಲೆ ಹೋಗುತ್ತೆ.

ಹೌದು, ರಿಲಾಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಚ್ ಅವರ ಮದುವೆಗೆ ಅಂಬಾನಿ ದೊರೆಗಳು ಬರೋಬ್ಬರಿ 1,000 ಕೋಟಿ ವೆಚ್ಚ ಮಾಡುತ್ತಿದ್ದಾರೆ.

ಗುಜರಾತ್​ನ ಜಾಮ್​ ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಚ್ ಅವರ ಫ್ರೀ ವೆಡ್ಡಿಂಗ್ ಕಾರ್ಯಕ್ರಮ (1 ರಿಂದ ಮಾರ್ಚ್ 3 ರವರೆಗೆ) ಅದ್ದೂರಿಯಾಗಿ ನಡೆಯುತ್ತಿದೆ. ಮೂರು ದಿನ ಜಾಮ್‌ನಗರಕ್ಕೆ ಸ್ವರ್ಗವೇ ಧರೆಗಿಳಿದಿದೆ. ಈ ಕಾರ್ಯಕ್ರಮಕ್ಕೆ ಅಂಬಾನಿಗಳು ಭಾರಿ ಹಣ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

ಫ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತರಾಷ್ಟ್ರೀಯ ಕಲಾವಿದರನ್ನು ಕರೆಸಲಾಗಿದೆ. ಅಂತರಾಷ್ಟ್ರೀಯ ಗಾಯಕಿ ರಿಹಾನಾ, ಅರ್ಜಿತ್‌ ಸಿಂಗ್‌, ದಿಲ್ಜಿತ್‌ ದೋಸಂಜ್‌, ಪ್ರೀತಂ, ಹರಿಹರನ್‌ ಮತ್ತು ಅಜಯ್‌ ಅತುಲ್‌ ಕೂಡ ಸಂಗೀತ ಪ್ರದರ್ಶನ ನೀಡಲಿದ್ದಾರೆ. ರಿಯಾನಾ ಜೊತೆ ಬಿಯಾನ್ಸಾ, ಕ್ರಿಸ್‌ ಮಾರ್ಟಿನ್‌, ಮರೂನ್‌ 5 ತಂಡ, ಜಾನ್‌ ಲೆಜೆಂಡ್‌ ಅವರು ಸೇರಿ ಅನೇಕ ಕಲಾವಿದರನ್ನು ಆಹ್ವಾನಿಸಲಾಗಿದೆ.

ರಿಹಾನಾಗೆ ಬರೋಬ್ಬರಿ 53 ಕೋಟಿ

ಅಂತರಾಷ್ಟ್ರೀಯ ಗಾಯಕಿ ರಿಹಾನಾಗೆ ಬರೋಬ್ಬರಿ 53 ಕೋಟಿ ರೂ. ನೀಡಲಾಗಿದೆ. ಗಾಯಕಿ ಬಿಯಾನ್ಸ್‌ ಅವರಿಗೆ 33 ಕೋಟಿ ರೂ., ಗಾಯಕ ಕ್ರಿಸ್‌ ಮಾರ್ಟಿನ್‌ ಅವರಿಗೆ 8 ಕೋಟಿ ರೂ., ಆಡಮ್‌ ಲೇವಿ ನೇತೃತ್ವದ ಮರೂನ್‌ ತಂಡಕ್ಕೆ 10 ಕೋಟಿ ರೂ. ಹಾಗೂ ಗಾಯಕ ಜಾನ್‌ ಲೆಜೆಂಡ್‌ ಅವರಿಗೆ 8 ಕೋಟಿ ರೂ. ಸಂಭಾವನೆ ನೀಡಲಾಗಿದೆ.

ಜಾಮ್​ ನಗರಕ್ಕೆ ಹರಿದುಬಂದ ಗಣ್ಯರು

ಮೂರು ದಿನಗಳ ಕಾರ್ಯಕ್ರಮಕ್ಕೆ ಅನಿಲ್ ಅಂಬಾನಿ, ಬಿಲ್ ಗೆಟ್ಸ್​, ರಿಹಾನ್ನಾ, ಇವಾಂಕಾ ಟ್ರಂಪ್, ಎನ್​ಸಿಪಿ ನಾಯಕ ಪ್ರಫುಲ್ ಪಟೇಲ್, ಅಜಯ್ ದೇವಗನ್, ಜಾನ್ ಅಬ್ರಹಾಂ, ಎಂ.ಎಸ್. ಧೋನಿ, ರಶೀದ್ ಖಾನ್, ರೋಹಿತ್ ಶರ್ಮಾ, ಇಶಾನ್ ಕಿಶನ್, ಅಮೀರ್ ಖಾನ್, ರಾಮ್ ಚರಣ್, ಸಲ್ಮಾನ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದಾರೆ.

RELATED ARTICLES

Related Articles

TRENDING ARTICLES