Friday, September 20, 2024

ಪ್ರೊ ಕಬಡ್ಡಿ.. ಹರಿಯಾಣ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪುಣೇರಿ ಪಲ್ಟನ್

ಬೆಂಗಳೂರು : ಪ್ರೊ ಕಬಡ್ಡಿ ಲೀಗ್​ನ ​10ನೇ ಸೀಸನ್​ನಲ್ಲಿ ಪುಣೇರಿ ಪಲ್ಟನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಹರಿಯಾಣ ಸ್ಟೀಲರ್ಸ್ ವಿರುದ್ಧದ ಫೈನಲ್​ ಪಂದ್ಯದಲ್ಲಿ ಪುಣೇರಿ ಪಲ್ಟನ್ 28-25 ಅಂಕಗಳ ಮೂಲಕ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ​(PKL) ಕಪ್​ ಅನ್ನು ಎತ್ತಿ ಹಿಡಿಯಿತು.

ಈ ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡದ ಪಂಕಜ್​ ಮೋಹಿತೆ 9 ಅಂಕ, ಮೋಹಿತ್ ಗೋಯತ್ 5 ರೇಡ್ ಪಾಯಿಂಟ್ ಹಾಗೂ ಗೌರವ್ 4 ಟ್ಯಾಕಲ್ ಪಾಯಿಂಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪುಣೇರಿ ಪಲ್ಟನ್​ಗೆ 3 ಕೋಟಿ ರೂ.

ಚಾಂಪಿಯನ್ ತಂಡ ಪುಣೇರಿ ಪಲ್ಟನ್​ಗೆ 3 ಕೋಟಿ, ರನ್ನರ್ ಅಪ್ ತಂಡ ಹರಿಯಾಣ ಸ್ಟೀಲrರ್ಸ್​ಗೆ 1.5 ಕೋಟಿ, ಸೆಮಿಫೈನಲ್ಸ್ ನಲ್ಲಿ ಸೋತ ತಂಡಳಿಗೆ ತಲಾ 90 ಲಕ್ಷ, ಎಲಿಮಿನೇಟರ್​ನಲ್ಲಿ ಸೋಲುಕಂಡ ತಂಡಗಳಿಗೆ 45 ಲಕ್ಷ ನೀಡಲಾಯಿತು. ಒಟ್ಟು 8 ಕೋಟಿ ರೂ. ಬಹುಮಾನದ ಪೈಕಿ 7.5 ಕೋಟಿಯನ್ನು ಅಗ್ರ 6 ತಂಡಗಳಿಗೆ ನೀಡಲಾಯಿತು. ಉಳಿದ 50 ಲಕ್ಷ ರೂ. ಪ್ರತ್ಯೇಕವಾಗಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಮತ್ತು ತೀರ್ಪುಗಾರರಿಗೆ ನೀಡಲಾಯಿತು.

70 ದಿನಗಳು, ಒಟ್ಟು 132 ಪಂದ್ಯಗಳು

ಕಳೆದ ವರ್ಷ ಡಿಸೆಂಬರ್ 2 ರಂದು ಪ್ರೊ ಕಬಡ್ಡಿ ಪ್ರಾರಂಭವಾಯಿತು. ಒಟ್ಟು 70 ದಿನಗಳು ಮತ್ತು ಫೈನಲ್​ ಸೇರಿ 132 ಪಂದ್ಯಗಳ ನಡೆದಿವೆ. ಈ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ಪ್ರತಿ ತಂಡ 22 ಪಂದ್ಯಗಳನ್ನಾಡಿವೆ. ಇದರಲ್ಲಿ 11 ಪಂದ್ಯಗಳು ತವರಿನಲ್ಲಿ ನಡೆದಿದ್ದು, 11 ಪಂದ್ಯಗಳು ಎದುರಾಳಿ ತಂಡಗಳ ಜಾಗದಲ್ಲಿ ನಡೆದಿವೆ.

RELATED ARTICLES

Related Articles

TRENDING ARTICLES