Friday, September 20, 2024

Rameshwaram Cafe: ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ: ಐವರು ಆಸ್ಪತ್ರೆಗೆ ದಾಖಲು

ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವಾಗಿ ಮೂವರು ಹೋಟೆಲ್ ಸಿಬ್ಬಂದಿ ಸೇರಿ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಫೋಟದ ರಭಸಕ್ಕೆ ರಾಮೇಶ್ವರಂ ಕೆಫೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು, ಸ್ಥಳಕ್ಕೆ ಹೆಚ್​ಎಎಲ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಅಗ್ನಿಶಾಮಕದಳದ ಸಿಬ್ಬಂದಿಯೂ ಆಗಮಿಸಿದೆ. ಕೆಫೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ ಎಂದು ಹೇಳಲಾಗುತ್ತಿದ್ದು,  ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ರಾಮೇಶ್ವರಂ ಕೆಫೆ ಸುತ್ತಮುತ್ತಲಿನ  ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕೆಫೆಗೆ ಬಂದಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿತ್ತಾ ಸ್ಫೋಟಕ..?

ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟ ಹಾಗೂ ಬಾಯ್ಲರ್‌ ಸ್ಫೋಟನಾ? ಅಥವಾ ವ್ಯಕ್ತಿ ತಂದಿದ್ದ ಎನ್ನಲಾದ ನಿಗೂಢ ವಸ್ತು ಸ್ಫೋಟನಾ? ಮೈಕ್ರೋ ಓವನ್‌ನಿಂದ ಸ್ಫೋಟ ಸಂಭವಿಸಿದ್ಯಾ..? ಎಂಬ ಮಾಹಿತಿ ತಿಳಿದಿಲ್ಲ

ಈ ಘಟನೆ ಬೆಂಗಳೂರಿನ ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES