Friday, September 20, 2024

ಇನ್ನೆರಡು ದಿನ ಬಿಸಿಲು ಹೆಚ್ಚಳ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಅಕ್ಷರಶಃ ಕಾವೇರುತ್ತಿದೆ. ಉತ್ತರ, ದಕ್ಷಿಣ ಒಳನಾಡುಗಳು, ಮಲೆನಾಡು, ಕರಾವಳಿ ಭಾಗಗಳು ಬಿಸಿಲಿಗೆ ಕಂಗೆಡುತ್ತಿವೆ.

ಎಲ್ಲಿ ನೋಡಿದರೂ ಬಿಸಿಲು, ಧಗೆ, ಸೆಕೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹಲವು ಕಡೆ ಗುರುವಾರ ಮತ್ತು ಶುಕ್ರವಾರ ಗರಿಷ್ಠ ತಾಪಮಾನದಲ್ಲಿ ಸರಿಸುಮಾರು 2 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಇಂದು ಕನ್ನಡ ನಾಮಫಲಕ ಹಾಕದಿದ್ರೆ ಅಂಗಡಿ ಬಂದ್​: BBMP

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನು ಈ ಭಾಗದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನ ಸಹ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ.

RELATED ARTICLES

Related Articles

TRENDING ARTICLES