Sunday, May 12, 2024

ಇಂದು ಕನ್ನಡ ನಾಮಫಲಕ ಹಾಕದಿದ್ರೆ ಅಂಗಡಿ ಬಂದ್​: BBMP

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಬರುವ ಮಳಿಗೆಗೆಳ ನಾಮಫಲಕಗಳಲ್ಲಿ ಶೇ. 60 ಕನ್ನಡ ಅಳವಡಿಸದ ವಾಣಿಜ್ಯ ಉದ್ದಿಮೆ, ಮಳಿಗೆಗಳಿಗೆ ಬೀಗ ಮುದ್ರೆ ಹಾಕುವ ಜತೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಕನ್ನಡ ನಾಮಫಲಕ ಅಳವಡಿಕೆಗೆ ನೀಡಿದ ಗಡುವು ಬುಧವಾರಕ್ಕೆ ಮುಗಿದಿರುವುದರಿಂದ, ಫೆ.29ರಿಂದ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಇಂದು BBMP ಬಜೆಟ್ ಮಂಡನೆ

ಉದ್ಯಮಿಗಳು ತಮ್ಮ ಅಂಗಡಿಗಳ ಮುಂದೆ 60 ಪರ್ಸೆಂಟ್​ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಬಿಬಿಎಂಪಿ ಇಂದು ಕೊನೆಯ ಗಡುವು ನೀಡಿದ್ದು ಸಂಜೆಯವರೆಗೂ ಕಾಲಾವಕಾಶ ನೀಡಿದೆ ಈ ಬಗ್ಗೆ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.

ಇಂದು ಸಂಜೆಯೊಳಗೆ ಕನ್ನಡ ಬೋರ್ಡ್ ಕಡ್ಡಾಯವಾಗಿ ಅಳವಡಿಸಲು ಎಲ್ಲಾ ಅಂಗಡಿಕಾರರಿಗೆ ಸೂಚನೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ಅಂಗಡಿ ಬಂದ್ ಮಾಡುವುದಾಗಿ ತುಷಾರ್ ಗಿರಿನಾಥ್ ಎಚ್ಚರಿಸಿದ್ದಾರೆ. ಬೋರ್ಡ್​ಗಳಲ್ಲಿ ಶೇ.60ರಷ್ಟು ಕನ್ನಡ ಇರಲೇಬೇಕು. ಈಗಾಗಲೇ ಶೇ.90ರಷ್ಟು ಬೋರ್ಡ್​ ಬದಲಾವಣೆ ಆಗಿದೆ. ಇನ್ನು ಉಳಿದಿರೋದು ಕೇವಲ 13 ಸಾವಿರ ಬೋರ್ಡ್ ಮಾತ್ರ ಎಂದು ಅವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES