Sunday, May 12, 2024

ಇಂದು BBMP ಬಜೆಟ್ ಮಂಡನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ ಇವತ್ತು ಮಂಡನೆ ಆಗಲಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಅವರು ಬೆಳಿಗ್ಗೆ 10.30ಕ್ಕೆ ಪುರಭವನದಲ್ಲಿ ಬಜೆಟ್ ಮಂಡಿಸಲಿದ್ದಾರೆ.

ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಆಯವ್ಯಯ ಸಿದ್ಧಪಡಿಸುತ್ತಿರುವುದು ಇದು ಸತತ ನಾಲ್ಕನೇ ವರ್ಷ. 2023-24ನೇ ಸಾಲಿನಲ್ಲಿ ₹11,163 ಕೋಟಿಯ ಬಜೆಟ್ ಅನ್ನು ಹಣಕಾಸು ವಿಭಾಗದ ಅಂದಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಂಡಿಸಿದ್ದರು. ಮಾರ್ಚ್ 2ರಂದು ಮಂಡಿಸಿ, ₹6.14 ಕೋಟಿ ಉಳಿತಾಯವಾಗುತ್ತದೆ ಎಂದು ಬಣ್ಣಿಸಿದ್ದರು. ಆದರೆ, ಬಜೆಟ್‌ನ ಶೇ 25ರಷ್ಟೂ ಅನುಷ್ಠಾನವಾಗಿಲ್ಲ. ಯೋಜನೆಗಳೂ ಆರಂಭವಾಗಿಲ್ಲ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಫೆಬ್ರವರಿಯ ಕೊನೆಯ ದಿನ, ಈ ರಾಶಿಗೆ ಗುರು ರಾಯರ ಕೃಪಾಕಟಾಕ್ಷ!

ಈ ಬಾರಿ ಕಳೆದ ಬಜೆಟ್‌ನ ಗಾತ್ರಕ್ಕಿಂತ ಸುಮಾರು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನವಿಲ್ಲದೆ ತನ್ನದೇ ಸಂಪನ್ಮೂಲವನ್ನು ಒದಗಿಸಿಕೊಂಡು ಯೋಜನೆಗಳನ್ನು ಬಿಬಿಎಂಪಿ ರೂಪಿಸಬೇಕಿದೆ. ಆಸ್ತಿ ತೆರಿಗೆ ಹೆಚ್ಚಳ, ಇತರೆ ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ, ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

RELATED ARTICLES

Related Articles

TRENDING ARTICLES