Wednesday, September 18, 2024

RCBಗೆ ವಿರೋಚಿತ ಸೋಲು.. ಸ್ಮೃತಿ ಮಂಧಾನ ಏಕಾಂಗಿ ಹೋರಾಟ ವ್ಯರ್ಥ

ಬೆಂಗಳೂರು : ಸತತ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿದೆ.

ಮಹಿಳಾ ಪ್ರೀಮಿಯರ್​ ಲೀಗ್​ನ 7ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ 194 ರನ್​ ಗಳಿಸಿತ್ತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು 9 ವಿಕೆಟ್ ನಷ್ಟಕ್ಕೆ 169 ರನ್​ ಮಾತ್ರ ಗಳಿಸಿತು.

ಈ ಮೂಲಕ ಆರ್​ಸಿಬಿ 25 ರನ್​ಗಳಿಂದ ಸೋಲು ಅನುಭವಿಸಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್​ಸಿಬಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಅವಕಾಶ ಕೈಚೆಲ್ಲಿತು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು.

ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ (74) ಏಕಾಂಗಿ ಹೋರಾಟ ನಡೆಸಿದರು. ಮೇಘನಾ 36, ಡೆವಿನ್ 23, ರಿಚಾ ಘೋಶ್ 19 ರನ್ ಗಳಿಸಿದ್ದು ಬಿಟ್ಟರ್ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಡೆಲ್ಲಿ ಪರ ಜಾನ್​ಸೆನ್ 3, ಅರುಂಧತಿ ಹಾಗೂ ಮರಿಜಾನ್ನೆ ಕೆಪ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಶೆಫಾಲಿ, ಮರಿಜಾನ್ನೆ ಸ್ಫೋಟಕ ಬ್ಯಾಟಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಶೆಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಶೆಫಾಲಿ ವರ್ಮಾ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ಸಹಿತ ಅರ್ಧಶತಕ (50) ಸಿಡಿಸಿದರು. ಆಲಿಸ್ ಕ್ಯಾಪ್ಸೆ 46, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮರಿಜಾನ್ನೆ ಕೆಪ್ 32 ಹಾಗೂ ಜೆಸ್ ಜೊನಾಸೆನ್ 36 ರನ್ ಸಿಡಿಸಿದರು. ಆಲ್​ರೌಂಡ್ ಆಟ ಪ್ರದರ್ಶಿಸಿ ಗೆಲುವಿನ ರೂವಾರಿಯಾದ ಮರಿಜಾನ್ನೆ ಕೆಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES