Thursday, September 19, 2024

ಪಾಕಿಸ್ತಾನ್ ಜಿಂದಾಬಾದ್ ಕೂಗು ಯಾರೇ ಹೇಳಿದ್ದರು ಅವರ ವಿರುದ್ದ ಕಠಿಣ ಕ್ರಮ: ಸಿಎಂ

ಬೆಂಗಳೂರು: ಮಂಗಳವಾರ ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಕೂಗು ಕೇಳಿಬಂದಿದೆ ಎನ್ನುವ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಪಾಕಿಸ್ತಾನ್​ ಎಂಬ ಘೋಷಣೆಯನ್ನು ಯಾರೇ ಕೂಗಿದ್ದರು ಅದನ್ನ ಖಂಡಿಸುತ್ತೇವೆ, ಈಗಾಗಲೇ ಪಾಕಿಸ್ತಾನ ಜಿಂದಾಬಾದ್​ ಎಂಬ ಕೂಗು ಕೇಳಿ ಯಾರು ಆಡಿದ್ದಾರೆ? ಏನೆಂದು ಕೂಗಿದ್ದಾರೆ ಎನ್ನುವ ಸ್ಷಷ್ಟ ಮಾಹಿತಿ ತಿಳಿಯಲು FSLಗೆ ಕಳಿಸಿದ್ದೇವೆ. ಅದರ ವರದಿ​ ಬರಬೇಕಿದೆ. ವರದಿಯಲ್ಲಿ ಕೂಗಿರುವುದು ಸಾಬೀತಾದರೇ ರಾಷ್ಟ್ರದ್ರೋಹದ ಕೆಲಸ ಯಾರೇ ಮಾಡಿದರು ಇದನ್ನು ಖಂಡಿಸುತ್ತೇವೆ ಮತ್ತು ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ.? : ಆರ್​. ಅಶೋಕ್​ ಕಿಡಿ

ಇನ್ನೂ ವಿಧಾನಸೌಧದಲ್ಲೆ ಇಂಥ ಕೂಗು ಕೇಳಿಬರುತ್ತಿರುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶ ದ್ರೋಹದ ಕೂಗು ಕೂಗುವವರು ಇಲ್ಲಾದರೇನು ಎಲ್ಲಾದರೇನು? ಯಾರೇ ಈ ಕೂಗು ಕೂಗಿದ್ದರು ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES