Friday, September 20, 2024

ಆರೋಗ್ಯ ಸಮಸ್ಯೆಯಿಂದ ನಾನು ಮತದಾನಕ್ಕೆ ಹೋಗಿಲ್ಲ : ಶಿವರಾಂ ಹೆಬ್ಬಾರ್

ಕಾರವಾರ : ನಾನು ಯಾರಿಗೊ ಹೆದರಿಕೊಂಡಾಗಲಿ ಅಥವಾ ಬೇರೆ ಯಾವುದೇ ಉದ್ದೇಶದಿಂದ ಮತದಾನ ಮಾಡದೆ ದೂರು ಉಳಿದುಕೊಂಡಿಲ್ಲ ಎಂದು ಶಾಸಕ ಶಿವರಾಂ ಹೆಬ್ಬಾರ್ ಹೇಳಿದರು.

ಸ್ವ ಕ್ಷೇತ್ರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ವೈದ್ಯರು ಒಂದಿಷ್ಟು ಗಂಟೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿರೋದಕ್ಕೆ ಮತದಾನಕ್ಕೆ ಹೋಗೋದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಅವರು ತಮ್ಮ ಶಾಸಕರು ಒಗ್ಗಟ್ಟಿನಿಂದ ಇದ್ದರೆ ಅಂತ ತೋರಿಸಲುಕೊಳ್ಳಲು ಅಭ್ಯರ್ಥಿ ಹಾಕಿದ್ದರು ಅಷ್ಟೇ. ರಾಜ್ಯಸಭಾ ಚುನಾವಣೆಯಲ್ಲಿ ನಾನು ವೋಟ್ ಮಾಡದೆ ಇರುವುದರಿಂದ ಏನು ಭಾರಿ ಬದಲಾವಣೆ ಏನು ಆಗಿಲ. ನನಗೆ ವೋಟ್ ಹಾಕಲು ಆಗಲಿಲ್ಲ ಅಂತ ಬೇಸರ ಇದೆ ಎಂದು ಹೇಳಿದರು.

ಬಿಜೆಪಿ‌ ಪಕ್ಷದ ಮೇಲೆ ಅಸಮಾಧಾನ ಇದೆ

ನಾನು ಯಾರಿಗೂ ಹೆದರಿ, ಬೆದರಿ ಮತದಾನಕ್ಕೆ ಹೋಗಿಲ್ಲ. ಆ‌ ಅವಶ್ಯಕತೆಯೂ ತನಗಿಲ್ಲ. ಅಲ್ಲದೇ, ರಾಜ್ಯ ರಾಜಕಾರಣದಲ್ಲಿ ಎಲ್ಲವನ್ನು ಎದುರಿಸಲು ಸಿದ್ಧ. ಕಾನೂನು ಹೋರಾಟ ಆಗಿರಲಿ ಅಥವಾ ರಾಜಕೀಯ ವಿಷಯ ಆಗಲಿ. ನಿನ್ನೆಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಬೇಕಿತ್ತು ನೀಡಿದ್ದೇನೆ. ತನಗೆ ಬಿಜೆಪಿ‌ ಪಕ್ಷದ ಮೇಲೆ ಅಸಮಾಧಾನ ಇದೆ ಎಂದು ತಿಳಿಸಿದರು.

ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ

ತನ್ನನ್ನು ಸ್ಥಳೀಯ ಬಿಜೆಪಿ ನಾಯಕರು ಸೋಲಿಸಲು ಪ್ರಯತ್ನ ಪಟ್ಟರು‌. ಇದನ್ನ ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಆದರೆ, ಯಾವುದೇ ಕ್ರಮ ಇಲ್ಲ ತೆಗೆದುಕೊಂಡಿಲ್ಲ. ಸದ್ಯ ಯಾವುದೇ ಕಾರಣಕ್ಕೂ ತಾನು ಬಿಜೆಪಿ ಬಿಟ್ಟು ಹೋಗಲ್ಲ. ಬಿಜೆಪಿಗೆ ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ. ಮುಂದೆ ಏನು? ಹೇಗೆ? ರಾಜಕಾರಣ ಬದಲಾದಣೆ ಆಗುತ್ತೆ ಅಂತ ಕಾದು ನೋಡೋಣ ಎನ್ನುವ ಮೂಲಕ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಅಲ್ಲೆಗೆಳೆದಿದ್ದಾರೆ.

RELATED ARTICLES

Related Articles

TRENDING ARTICLES