Friday, September 20, 2024

ನಮ್ಮ ಕುಟುಂಬ ಸೋತಾಗ ಕುಗ್ಗಲ್ಲ, ಗೆದ್ದಾಗ ಹಿಗ್ಗಲ್ಲ : ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ನಮ್ಮ ಕುಟುಂಬ ಸೋತಾಗ ಕುಗ್ಗಲ್ಲ, ಗೆದ್ದಾಗ ಹಿಗ್ಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಎರಡು ಬಾರಿ ಸೋತಿಲ್ವಾ? ವಾಜಪೇಯಿ ಸೋತಿಲ್ವಾ? ಸಿದ್ದರಾಮಯ್ಯ ಎಷ್ಟು ಸಲ ಸೋತಿದ್ದಾರೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರಿಗೆ ಹೇಳ್ತೇನೆ. ನಿಮ್ಮ ಅವಲೋಕನ ನೀವೆ ‌ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ನಿರೀಕ್ಷೆಗಳು ‌ಇಟ್ಕೊಂಡಿದ್ವಿ. ಈ ಸೋಲು ಆಡಳಿತ ಯಂತ್ರದ ದುರುಪಯೋಗ. ಕಳೆದ ಎರಡು ದಿನಗಳ ಹಿಂದೆಯೇ‌ ಹೀಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆ. ನಮಗೂ ಮಾಹಿತಿ‌ ಕೊಡೋರು ಇರ್ತಾರೆ. ಒಂದು ಬಾರಿ ಏರಿಕೆ, ‌ಇಳಿಕೆ ಆಗುತ್ತದೆ ಎಂದು ತಿಳಿಸಿದರು.

ಅವ್ರೇ ನಮ್ಮ ಮನೆ ಬಾಗಿಲಿಗೆ ಬಂದಿದ್ರು

ಕುಮಾರಸ್ವಾಮಿ ಅವಕಾಶವಾದಿ ಅಲ್ವಾ?ಎಂದು ಪ್ರಶ್ನೆ ಇಟ್ಟಿದ್ದಾರೆ. ಈಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋದ್ರಲ್ಲಾ. ಅವತ್ತು‌ ಇದೇ ಕಾಂಗ್ರೆಸ್ ನಾಯಕರೇ ನಮ್ಮ ಮನೆ ಬಾಗಿಲಿಗೆ ಬಂದಿದ್ರು. ಗುಲಾಬ್‌ ನಬಿ,‌ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾವು ಹೇಳಿದ್ವಿ. ನಮಗೆ ಮುಖ್ಯಮಂತ್ರಿ ಬೇಡ, ‌ನೀವೆ ಮಾಡ್ಕೊಳ್ಳಿ ಅಂತ ಹೇಳಿದ್ವಿ. ಇವತ್ತು ಬಿಜೆಪಿಗೆ ಟೋಪಿ ಹಾಕಿ ಕಾಂಗ್ರೆಸ್​ಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಾಕೆ ಇಷ್ಟೊಂದು ಅರ್ಜೆಂಟ್?

ಡಾ. ಮಂಜುನಾಥ್ ಸ್ಪರ್ಧೆ ಖಚಿತ ಎಂಬ ಪ್ರಶ್ನೆಗೆ,‌ ಯಾಕೆ ಇಷ್ಟೊಂದು ಅರ್ಜೆಂಟ್? ಈಗಷ್ಟೇ ಅಖಾಡ ಶುರುವಾಗುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES