Friday, September 20, 2024

ರಾಹುಲ್ ಗಾಂಧಿ ವಿರುದ್ಧ ಅಚ್ಚರಿ ಮಹಿಳಾ ಅಭ್ಯರ್ಥಿ ಸ್ಪರ್ಧೆ

ಬೆಂಗಳೂರು : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಕಳೆದ 2019ರಲ್ಲಿ ಕೇರಳದ ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇದೀಗ ಆ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಅಚ್ಚರಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ.

ರಾಹುಲ್ ಗಾಂಧಿ ಈ ಬಾರಿಯೂ ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ನಡುವೆ I.N.D.I.A ಒಕ್ಕೂಟದಲ್ಲಿದ್ದ ಸಿಪಿಐ, ದಿಢೀರ್​ ಎಂದು ಕೇರಳದ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಆನೀ ರಾಜಾ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಸಮಾನ ಮನಸ್ಕ ಪಕ್ಷವೇ ತನ್ನ ವಿರುದ್ಧ ಅಭ್ಯರ್ಥಿ ಘೋಷಿಸಿದೆ ಎಂದು ರಾಹುಲ್ ಗಾಂಧಿ ಆತಂಕಕ್ಕೆ ಒಳಗಾಗಿದ್ದಾರೆ.

ಆನೀ ರಾಜಾ ಯಾರು?

ಕೇರಳದ ವಯನಾಡಿನಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಆನೀ ರಾಜಾ ಸದ್ಯ ಭಾರತೀಯ ಮಹಿಳೆಯರ ರಾಷ್ಟ್ರೀಯ ಫೆಡರೇಷನ್​ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರೂ ಹೌದು.

ಆನೀ ರಾಜಾ ಅವರು ಪಕ್ಷದ ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರ ಪತ್ನಿಯಾಗಿದ್ದಾರೆ. ರಾಜಾ ಕೂಡ ರಾಜಕಾರಣಿಯಾಗಿದ್ದು, ತಮಿಳುನಾಡಿನಿಂದ ಎರಡು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಜೋಡಿಗೆ ಅಪರಾಜಿತಾ ರಾಜಾ ಎಂಬ ಓರ್ವ ಮಗಳು ಇದ್ದಾರೆ.

RELATED ARTICLES

Related Articles

TRENDING ARTICLES