Saturday, April 27, 2024

ಕೊಹ್ಲಿ, ಸಂಜು ಡಕ್ ಔಟ್.. ದುಬೆ 1 ಮತ್ತು ಜೈಸ್ವಾಲ್ 4 ರನ್, ಸಂಕಷ್ಟದಲ್ಲಿ ಭಾರತ

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದರೆ, ಭಾರತದ ಲೆಕ್ಕಾಚಾರವನ್ನು ಅಫ್ಘಾನಿಸ್ತಾನ ಬೌಲರ್​ಗಳು ಉಲ್ಟಾ ಮಾಡಿದ್ದಾರೆ.

ಇನ್ನಿಂಗ್ಸ್​ ಆರಂಭಿಸಿದ ಭಾರತ ಕೇವಲ 22 ರನ್​ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್​ ಕಳೆದುಕೊಂಡಿದೆ. ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಬಳಿಕ ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು.

ಕಳೆದೆರಡು ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಹೀರೋ ಎನಿಸಿಕೊಂಡಿದ್ದ ಶಿವಂ ದುಬೆ ಈ ಪಂದ್ಯದಲ್ಲಿ ಕೇವಲ 1 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಬಹಳ ದಿನಗಳ ನಂತರ ಟಿ-20 ತಂಡದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಕ್ಯಾಚ್​ ನೀಡಿ ಶೂನ್ಯಕ್ಕೆ ಔಟಾದರು.

30 ರನ್​ 4 ವಿಕೆಟ್ ಪತನ

ಪವರ್‌ಪ್ಲೇ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.. ಪವರ್‌ಪ್ಲೇಯಲ್ಲಿ ಭಾರತ ಪ್ರಮುಖ ಆಟಗಾರರಾದ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು, ಸಂಕಷ್ಟದಲ್ಲಿದೆ. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ ಮಲಿಕ್ 3 ಮತ್ತು ಉಮರ್ಜಾಯ್ 1 ವಿಕೆಟ್ ಪಡೆದು ಮಿಂಚಿದರು. ನಾಯಕ ರೋಹಿತ್ ಶರ್ಮಾ ಅಜೇಯ 27 ಹಾಗೂ ರಿಂಕು ಸಿಂಗ್ ಅಜೇಯ 19 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಪ್ರಸ್ತುತ 11.3 ಓವರ್​ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 68 ರನ್​ ಗಳಿಸಿದೆ.

RELATED ARTICLES

Related Articles

TRENDING ARTICLES