Saturday, April 27, 2024

‘ಶಿವಮೊಗ್ಗ ಕಲಿ’ಗಳ ಹಣೆಬರಹ ಬರೆಯಲಿದ್ದಾರೆ 14 ಲಕ್ಷ ಮತದಾರರು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ. 

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7,28,886 ಪುರುಷ, 7,43,713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 14,73,327 ಮತದಾರರಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಎಲ್ಲಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ  1775 + 7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2,050 ಪಿಆರ್‍ಓ, 2,050 ಎಪಿಆರ್‍ಓ, 4,100 ಪಿಓ ಸೇರಿದಂತೆ ಒಟ್ಟು 8,200 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

240 ಬಸ್‍ಗಳ ನಿಯೋಜನೆ

ಒಟ್ಟು 8,156 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್‍ಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಬಹಿರಂಗ ಪ್ರಚಾರಕ್ಕೆ ತೆರೆ, ಮನೆ-ಮನೆ ಪ್ರಚಾರಕ್ಕೆ ಮಾತ್ರ ಅವಕಾಶ

ಮಸ್ಟರಿಂಗ್, ಡಿಮಸ್ಟರಿಂಗ್ ಸ್ಥಳ

ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳಗಳನ್ನು ಗುರುತಿಸಲಾಗಿದೆ.  ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮತ್ತು ಎಸ್.ಆರ್. ನಾಗಪ್ಪಶೆಟ್ರಿ ಸ್ಮರಕ ರಾಷ್ಟ್ರೀಯ ಅನ್ವಯಿಕ ಸೈನ್ಸ್ ಪಿಯು ಕಾಲೇಜ್, ಶಿವಮೊಗ್ಗ. ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ.

ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ. ತೀರ್ಥಹಳ್ಳಿ-114 ಡಾ.ಯು.ಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES