Wednesday, September 18, 2024

ಅಯ್ಯೋ : ಮತ್ತೆ ವಿವಾದ ಮೈ ಮೇಲೆ ಎಳೆದುಕೊಂಡ ಸಿ.ಟಿ ರವಿ

ಬೆಂಗಳೂರು : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಾಯಕರ ಪೈಕಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಮೊದಲ ಸಾಲಿನಲ್ಲೇ ನಿಲ್ಲುತ್ತಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವಾಗ ಪ್ರತಿ ಬಾರಿಯೂ ಮುಸ್ಲಿಂ ಸಮುದಾಯ ಹಾಗೂ ಟಿಪ್ಪು ಸುಲ್ತಾನ್ ವಿಷಯ ಕೆದಕಿ ಮತ್ತೆ ಮೈ ಮೇಲೆ ವಿವಾದ ಎಳೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿ.ಟಿ ರವಿ(C.T. Ravi) ಅವರು, ‘ಟಿಪ್ಪು ಮೈಸೂರು ಹುಲಿ’ ಎಂಬ ವಿಚಾರಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.

ಮೋಸಗಾರನ ಮಗ ಟಿಪ್ಪು

ಟಿಪ್ಪು ಮೈಸೂರು ಹುಲಿ ಅಲ್ಲ, ಆತ ಸಂಚುಕೋರ, ಮೋಸಗಾರನ ಮಗ ಟಿಪ್ಪು ಸುಲ್ತಾನ್, ಹೈದರಾಲಿ ವಿರುದ್ಧ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ. ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಒಬ್ಬ ಮೋಸಗಾರ. ಲಕ್ಷ್ಮೀ ಅಮ್ಮಣ್ಣಿಯವರನ್ನು ಮೋಸದಿಂದ ಹೈದರಾಲಿ ಸೆರೆ ಮನೆಯಲ್ಲಿಟ್ಟಿದ್ದನು. ಟಿಪ್ಪು ಒಬ್ಬ ಸಂಚುಕೋರನ ಪುತ್ರನೆಂದು ಇತಿಹಾಸದಲ್ಲಿ ಹೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ :

ಇದು ಒಕ್ಕಲಿಗರ ಶೌರ್ಯ

ಟಿಪ್ಪುವಿನ ಬಗ್ಗೆ ಇತಿಹಾಸದಲ್ಲಿ ಗಾಳಿ ಪಾಠ ಮಾಡಲಾಗಿದೆ. ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಒಬ್ಬ ಮೋಸಗಾರ. ಉರಿಗೌಡ, ದೊಡ್ಡ ನಂಜೇಗೌಡ ಟಿಪ್ಪುವನ್ನು ಕೊಂದಿದ್ದಕ್ಕೆ ಅನೇಕ ದಾಖಲೆಗಳಿವೆ. ಇದು ಒಕ್ಕಲಿಗರ ಶೌರ್ಯ, ಆದರೆ, ಈ ಶೌರ್ಯವನ್ನು ಅದುಮಿಡುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜಾಮಿಯಾ ಮಸೀದಿ ಬಗ್ಗೆ ಸರ್ವೆ ಮಾಡ್ಲಿ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಗ್ಗೆಯೂ ಸರ್ವೆ ಮಾಡಿಸಲಿ. ಒಂದು ವೇಳೆ ಅದು ಮಂದಿರ ಅನ್ನೋದಾದ್ರೆ ಟಿಪ್ಪು ಮತಾಂಧ ಅನ್ನೋದನ್ನ ಒಪ್ಪಿಕೊಳ್ಳಬೇಕು, ಅಥವಾ ಇದು ಮಸೀದಿ ಅಂದ್ರೆ ನಾನು ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಸಿ.ಟಿ ರವಿ ಸವಾಲೆಸೆದಿದ್ದಾರೆ.

ಟಿಪ್ಪು ಸುಲ್ತಾನ್ ಪಾರ್ಸಿ ಭಾಷೆ ಹೇರಿದ. ಆದರೆ, ನಮಗೆಲ್ಲ ‘ಟಿಪ್ಪು ಕನ್ನಡ ಪ್ರೇಮಿ’ ಅಂತ ಪಾಠ ಮಾಡಿದ್ದರು. ಸುಳ್ಳಿನ ಪಾಠ ಮಾಡುವ ಮೂಲಕ ನಮಗೆಲ್ಲ ಸುಳ್ಳಿನ ಇತಿಹಾಸ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES