Saturday, April 27, 2024

IND vs AUS Test : ಆಸಿಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಇಂದೋರ್ ನಲ್ಲಿ ನಡೆಯುತ್ತಿದ್ದ ಮೂರನೇ ಟೆಸ್ಟ್ ನಲ್ಲಿ ಆಸಿಸ್ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC) ಫೈನಲ್ ತಲುಪಿದೆ.

ಮೂರನೇ ದಿನ ಭಾರತ ನೀಡಿದ್ದ 76 ರನ್ ಗಳ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾ ಸುಲಭವಾಗಿ ಮುಟ್ಟಿತು. ಆಸಿಸ್ ಪರ ಖವಾಜ (0) ವಿಕೆಟ್ ಕಳೆದಕೊಂಡರೂ ಮರ್ನಸ್ ಲಬುಶೇನ್ ಅಜೇಯ 28 ಹಾಗೂ ಟ್ರಾವಿಸ್ ಹೆಡ್ ಅಜೇಯ 49 ರನ್ ಗಳ ಜೊತೆಯಾಟ ಆಸ್ಟ್ರೇಲಿಯಾ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 109 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 163 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಮೊಲದ ಇನ್ನಿಂಗ್ಸ್ ನಲ್ಲಿ 197 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 78 ರನ್ ಗಳಿಸಿತ್ತು. ಭಾರತ ನೀಡಿದ್ದ ಸುಲಭ ಗುರಿಯನ್ನು ಒಂದು ವಿಕೆಟ್ ಕಳೆದುಕೊಂಡು, 9 ವಿಕೆಟ್ ಅಂತರದಿಂದ  ಗೆದ್ದು ಬೀಗಿತು.

ಭಾರತಕ್ಕೆ ಆಸ್ಟ್ರೇಲಿಯಾ ತಿರುಗೇಟು

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿದ್ದ ಆಸಿಸ್ ಮೂರನೇ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದೆ. ಈ ಮೂಲಕ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ, ಅಂತರವನ್ನು 2-1ಕ್ಕೆ ತಗ್ಗಿಸಿದೆ.

ಸ್ಮಿತ್ ಸಾಮರ್ಥ್ಯ ಸಾಬೀತು

ಮತ್ತೊಂದೆಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದತ್ತ ಕಣ್ಣಾಯಿಸಿರುವ ಭಾರತಕ್ಕೆ ಹಿನ್ನಡೆಯಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಅಲ್ಲದೆ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನ ವಹಿಸಿರುವ ಸ್ಟೀವ್ ಸ್ಮಿತ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

RELATED ARTICLES

Related Articles

TRENDING ARTICLES