Wednesday, January 22, 2025

ಸಿಎಂ ಮದುವೆ ಮನೆ ಎಂಟ್ರಿ ಬಗ್ಗೆ ಯಾರೂ ಕೆಮ್ಮಂಗಿಲ್ಲ

ಅದಿತಿ ಮದ್ವೆ ಅಟೆಂಡ್ ಮಾಡಿದ ಸಿಎಂ ಬಗ್ಗೆ ಯಾರೂ ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ. ಈ ಸಿಎಂಗೆ ಬೇರೇನೂ ಕೆಲಸ ಇಲ್ವಾ..? ಯಾರು ಎಲ್ಲೇ ಕರೆದ್ರೂ ಹೋಗ್ತಿರ್ತಾರೆ ಅಂತ ಗೊಣಗಿಕೊಳ್ಳೊಂಗಿಲ್ಲ.  ಯಾಕಂದ್ರೆ ಬಸವರಾಜ ಬೊಮ್ಮಾಯಿ ಅವ್ರ ನೆಂಟರು ಈ ಶ್ಯಾನೆ ಟಾಪ್ ಹುಡ್ಗಿ. ಯಶ್ ದಂಪತಿ ಸೇರಿದಂತೆ ಯಾರೆಲ್ಲಾ ಶುಭಕಾರ್ಯಕ್ಕೆ ಸಾಕ್ಷಿ ಆದ್ರು..? ಏನು ಹೇಳಿದ್ರು ಅನ್ನೋದನ್ನ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

  • ಯಶಸ್ವಿ ಮೆಟ್ಟಿಲೇರಿದ CM ಸಂಬಂಧಿ.. ಸ್ಟಾರ್ಸ್​ ಸಾಕ್ಷಿ..!
  • ರಾಕಿಂಗ್ ದಂಪತಿ ಸೇರಿದಂತೆ ತಾರೆಯರ ಸಮಾಗಮ..!
  • ನೂತನ ದಂಪತಿಗೆ ಶುಭ ಕೋರಿದ ಗಣ್ಯರು ಹೇಳಿದ್ದೇನು..?

ಐದಾರು ವರ್ಷದಲ್ಲಿ ಕನ್ನಡದ ಸೆನ್ಸೇಷನಲ್ ನಟೀಮಣಿಯಾಗಿ ಬೆಳೆದ ಬೆಣ್ಣೆ ನಗರಿ ದಾವಣಗೆರೆ ಮೂಲದ ಚೆಲುವೆ ಅದಿತಿ ಪ್ರಭುದೇವ. ಮಡಿಕೇರಿ ಮೂಲದ ಉದ್ಯಮಿ ಯಶ್​ರನ್ನ ವರಿಸಿದ್ದಾರೆ. ಬಹಳ ದಿನಗಳ ಹಿಂದೆ ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ನವೆಂಬರ್ 27 ಹಾಗೂ 28ರಂದು ಅದ್ದೂರಿ ಕಲ್ಯಾಣೋತ್ಸವದಿಂದ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಪ್ಯಾಲೆಸ್ ಗ್ರೌಂಡ್​ನಲ್ಲಿ ನಡೆದ ಅದಿತಿ- ಯಶಸ್ವಿ ವಿವಾಹ ಮಹೋತ್ಸವದಲ್ಲಿ ಎರಡೂ ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ಭಾಗಿಯಾಗಿ ನೂತನ ವಧು-ವರರನ್ನ ಆಶೀರ್ವದಿಸಿದ್ದಾರೆ. ಅದ್ರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಮದ್ವೆ ಅಟೆಂಡ್ ಮಾಡಿರೋದು ಟಾಕ್ ಆಫ್ ದಿ ಟೌನ್ ಆಗಿದೆ. ಅರೇ ಇವಪ್ಪಾ ಏನ್ರೀ ಯಾರು ಎಲ್ಲೇ ಕರೆದ್ರೂ ಹೋಗ್ತಾರೆ ಅಂತ ಒಂದಷ್ಟು ಮಂದಿ ಗೊಣಗಿಕೊಂಡಿದ್ದಾರೆ.

ಆದ್ರೆ ಅಸಲಿ ಮ್ಯಾಟರ್ ಕೇಳಿದ್ರೆ ಯಾರೂ ಕೆಮ್ಮಂಗಿಲ್ಲ. ಹೌದು.. ಅದಿತಿ ಪ್ರಭುದೇವ ಮದ್ವೆಗೆ ಬಂದು ಸಿಎಂ ವಿಶ್ ಮಾಡೋದಕ್ಕೆ ಬಲವಾದ ಕಾರಣವಿದೆ. ಸಿಎಂ ಅವ್ರ ತಾಯಿ ಕಡೆಯ ಸಂಬಂಧಿಯಂತೆ ಈ ಚೆಂದುಳ್ಳಿ ಚೆಲುವೆ ಅದಿತಿ ಪ್ರಭುದೇವ. ಅದೇ ಕಾರಣಕ್ಕೆ ಸಾಹೇಬ್ರು ಬಂದು ಶುಭ ಕೋರಿ, ಮಾಧ್ಯಮಗಳಿಗೆ ಅದ್ರ ಸ್ಪಷ್ಟನೆ ಕೂಡ ಕೊಟ್ಟು ಹೋಗಿದ್ದಾರೆ.

ಇನ್ನು ಇಂಟರ್​ನ್ಯಾಷನಲ್ ಸೆನ್ಸೇಷನ್ ರಾಕಿಭಾಯ್ ಯಶ್ ಪತ್ನಿ ರಾಧಿಕಾ ಪಂಡಿತ್ ಸಮೇತ ಬಂದು ಎಲ್ಲರ ಗಮನ ಸೆಳೆದರು. ನಟ ಶರಣ್, ರಂಜನಿ ರಾಘವನ್, ಶಿವರಾಜ್ ಕೆ ಆರ್ ಪೇಟೆ, ಸುಂದರ್ ವೀಣಾ ದಂಪತಿ, ಚಿಕ್ಕಣ್ಣ, ಮೇಘ ಶೆಟ್ಟಿ, ರಚನಾ ಇಂದರ್, ಹಿರಿಯನಟಿ ವಿನಯಾ ಪ್ರಸಾದ್, ಸಚಿವ ವಿ ಸೋಮಣ್ಣ ಸೇರಿದಂತೆ ಸಾಕಷ್ಟು ಸಿನಿಮಾ ಹಾಗೂ ರಾಜಕೀಯ ಗಣ್ಯರು ಬಂದು ಶುಭ ಕೋರಿದ್ರು.

ಒಟ್ಟಾರೆ ಯಶ್ ಜೊತೆ ಜೀವನದ ಮಹತ್ವದ ಘಟ್ಟವನ್ನು ಯಶಸ್ವಿಯಾಗಿ ತಲುಪಿರೋ ಅದಿತಿ ಪ್ರಭುದೇವ ಬದುಕು ಬಂಗಾರವಾಗಲಿ. ಆಕೆಯ ಕನಸುಗಳೆಲ್ಲಾ ನನಸಾಗಿ, ಕನ್ನಡತಿಯಾಗಿಯೇ ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES