ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಹಾಗೂ ಪತ್ರ ರೂಪದ ದಾಖಲೆಗಳು ವಶಕ್ಕೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎರಡು ದಿನ ಹಿಂದೆ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರತ್ ಪೌಲ್ ಅವರ ಬೆಂಗಳೂರು, ಪಟಿಯಾಲದ ನಿವಾಸ ಸೇರಿದಂತೆ ಪಿಎಸ್ಐ ಅಕ್ರಮ ಪರೀಕ್ಷೆಗೆ ಕೇಸ್ಗೆ ರಾಜ್ಯದ ವಿವಿಧೆಡೆ ಸೇರಿದಂತೆ 11 ಕಡೆಗಳಲ್ಲಿ ಪರಿಶೀಲನೆ ಇಡಿ ಪರಿಶೀಲನೆ ನಡೆಸಿತ್ತು. ಈಗ ಡಿಜಿಟಲ್ ಹಾಗೂ ಹಲವು ದಾಖಲೆಗಳನ್ನ ಇಡಿ ವಶಪಡಿಸಿಕೊಂಡಿದೆ.
2021ನೇ ಸಾಲಿನ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರು ಹಾಗೂ ಕಲಬುರಗಿಯ ವಿವಿಧೆಡೆ ಅಕ್ರಮದ ಕುರಿತು ಪ್ರಕರಣ ದಾಖಲಾಗಿದ್ದವು. ಬಳಿಕ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ಈ ವೇಳೆ ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಸಹಿತ ನೂರಕ್ಕೂ ಅಧಿಕ ಆರೋಪಿಗಳನ್ನ ಸಿಐಡಿ ಪೊಲೀಸರು ಬಂಧಿಸಿದ್ದರು.
ಸ್ಟ್ರಾಂಗ್ ರೂಮ್ ನಲ್ಲೇ ಓಎಂಆರ್ ಶೀಟ್ಸ್ ತಿದ್ದುಪಡಿಯ ಬಗ್ಗೆ ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಿತ್ತು. ಅಭ್ಯರ್ಥಿಗಳಿಂದ ಅಕ್ರಮವಾಗಿ ಹಣ ಪಡೆದಿರುವುದು ಸಾಬೀತಾದ ಹಿನ್ನೆಲೆ ಆಗಸ್ಟ್ 4ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ. ಮೊನ್ನೆ ಆರೋಪಿಗಳಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿತ್ತು.