Monday, December 23, 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್​ ನಟಿ ಆಲಿಯಾ ಭಟ್

ನವದೆಹಲಿ: ಬಾಲಿವುಡ್​ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ಇಂದು ತಮ್ಮ ಮೊದಲ ಮಗು, ಹೆಣ್ಣು ಮಗಳು ಜನ್ಮ ನೀಡೋ ಮೂಲಕ ಪೋಷಕರಾಗಿದ್ದಾರೆ.

ಆಲಿಯಾ ಭಟ್ ಅವರನ್ನು ಹೆರಿಗೆಗೆ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ನಟಿ ಮಧ್ಯಾಹ್ನ 12:05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ ಭಟ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಷಯವನ್ನ ಹಂಚಿಕೊಂಡಿದ್ದಾರೆ.

ಅವರಿಗೆ ಇಂದು ಬೆಳಗ್ಗೆ ಹೆರಿಗೆ ಬೇನೆ ಕಾಣಿಸಿಕೊಂಡ ಕಾರಣ ಪತಿ ರಣಬೀರ್ ಕಪೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಆಲಿಯಾ ಭಟ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

ಬಾಲಿವುಡ್​ನ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆ್ಯಂಡ್​ ಹಾಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್  ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದು. ಆಲಿಯಾ ಭಟ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಹಲವರು ಶುಭಾಶಯಗಳು ಹರಿದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES