Monday, December 23, 2024

ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಅಬಕಾರಿ ಇಲಾಖೆಯಿಂದ ಹಣ ಲೂಟಿ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ನಗರದ ಎಲ್ಲಾ ಬಾರ್​-ವೈನ್ಸ್ ಸ್ಟೋರ್ ಹಾಗೂ ಪಬ್​ಗಳಿಗೆ ಭುವನೇಶ್ವರಿ ಫೋಟೋ ಕೊಟ್ಟು ಅಬಕಾರಿ ಇಲಾಖೆಯ ಅಧಿಕಾರಿಗಳು ಹಣ ಲೂಟಿ ಪ್ರಕರಣ ಬೆಳಕಿಗೆ ಬಂದಿದೆ.‌

ಕನ್ನಡ ಭುವನೇಶ್ವರಿ ತಾಯಿಯ ಒಂದೊಂದು ಪೋಟೋಗೆ 1 ಸಾವಿರದಿಂದ 5 ಸಾವಿರದ ವರೆಗೂ ಪ್ರತಿ ಬಾರ್-ವೈನ್ ಸ್ಟೋರ್ ಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಣ ಪಡೆದಿದ್ದಾರೆಂದು ಆರೋಪಿಸಲಾಗಿದೆ.

ಇನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಪಬ್​ಗಳಿಗೆ  ಕನ್ನಡ ಭುವನೇಶ್ವರಿ ತಾಯಿಯ ಕೈಯಲ್ಲಿ ಕನ್ನಡದ ಭಾವುಟದ ಬದಲು ಬೇರೆ ಭಾವುಟ ನೀಡಿದ್ದು, ಹಣ ಮಾಡುವ ದಾವುಕದಲ್ಲಿ ಕನ್ನಡ ಭಾವುಟಕ್ಕೆ ಮಾಡಿದ್ರಾ ಅಬಕಾರಿ ಅಧಿಕಾರಿಗಳು‌ ಅವಮಾನ ಮಾಡಿದ್ರಾ ಎಂಬ ಪ್ರಶ್ನೆ ವ್ಯಕ್ತವಾಗಿದೆ.

ಆದರೇ ಹಣಪಡೆಯುವ ದಾವುಕದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಲು ಲೂಟಿಗಿಳಿದ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು. ಪಬ್ ಬಾರ್ ಗಳಲ್ಲಿ ಹೇಗೆ ಭುವನೇಶ್ವರಿ ಫೋಟೋ ಇಡುವುದಕ್ಕೆ ಅವಕಾಶ ಕೊಟ್ಟಿದ್ದೀರಿ. ಕನ್ನಡ ತಾಯಿಗೆ ಮಾಡಿದ ಅವಮಾನ ಅಂತ ಕನ್ನಡ ಸಂಘಟನೆಗಳಿಂದ ಕಿಡಿಕಾರಿದರು.

ಇತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನ ಈ ಬಗ್ಗೆ ಕೇಳಿದ್ರೆ ಅಬಕಾರಿ ಅಧಿಕಾರಿಗಳು ನೀಡಿದರ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಮತಾನಾಡಿದ್ದೀನಿ. ಈ ಬಗ್ಗೆ ಮಾಹಿತಿ ಇಲ್ಲವಂತೆ. ಇಂದು ಈ ವಿಷಯದ ಬಗ್ಗೆ ದೂರು ನೀಡುತ್ತೇವೆ. ಇದು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡಿದ ಅಪಮಾನ. ಸಾಹಿತ್ಯ ಪರಿಷತ್ತಿಗೆ ಕೆಟ್ಟ ಹೆಸರು ತರಲು ಈ ರೀತಿ ಕೆಲ ಕಿಡಿ ಕೇಡಿಗಳು ಕೆಲಸ ಮಾಡಿದ್ದಾರೆ. ಸಾಹಿತ್ಯ ಪರಿಷತ್ತಿಗೆ ತನ್ನದೆ ಆದ ಇತಿಹಾಸ ಇದೆ. ಈ ಪ್ರಕರಣವನ್ನು ಪೊಲೀಸ್ ತನಿಖೆಗೆ ಒಳಪಡಿಸುವಂತೆ ದೂರು ನೀಡಿ ಕಠಿಣ ಕ್ರಮಕ್ಕೆ ಒತ್ತಯಿಸುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.

RELATED ARTICLES

Related Articles

TRENDING ARTICLES