Monday, December 23, 2024

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಶಾಕ್​ ಮೇಲೆ ಶಾಕ್​.!

ಬೆಂಗಳೂರು: 2023 ವಿಧಾನಸಭೆ ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಶಾಕ್ ಮೇಲೆ ಶಾಕ್ ವ್ಯಕ್ತವಾಗುತ್ತಿದೆ.

ಇಡಿ(ಜಾರಿ ನಿರ್ದೇಶನಾಲಯ) ಡಿ.ಕೆ ಶಿವಕುಮಾರ್​ ಅವರಿಗೆ ಸಮನ್ಸ್​ ನೀಡಿತ್ತು. ಈ ಬೆನ್ನಲೆಯಲ್ಲಿ ಇಂದು ಡಿಕೆಶಿ ದೆಹಲಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಡಿಕೆ ಶಿವಕುಮಾರ್​ ಅವರಿಗೆ ಐಟಿ ಶಾಕ್ ನೀಡಿದೆ.

ಐಟಿ ತನಿಖೆ ಪ್ರಶ್ನಿಸಿ ಡಿಕೆಶಿ ಹೈಕೋರ್ಟ್ ಮೋರೆ ಹೋಗಿ ತಾತ್ಕಾಲಿಕ ತನಿಖೆಯಿಂದ ರಿಲೀಫ್ ಪಡೆದುಕೊಂಡಿದ್ದರು. ಈ ತೀರ್ಪು ಪ್ರಶ್ನಿಸಿ ಐಟಿ ತನಿಖಾ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟೀಲೆರಿತ್ತು. ಹೈಕೋರ್ಟ್​ ಆದೇಶಕ್ಕೆ ಈಗ ಸುಪ್ರೀಂಕೋರ್ಟ್​ ತಡೆ ನೀಡಿದೆ. ನ್ಯಾ. ಸಂಜೀವ್ ಖನ್ನಾ ಪೀಠದಿಂದ ಹೈಕೋರ್ಟ್​ ತೀರ್ಪಿಗೆ ತಡೆ, ಹೊಸದಾಗಿ ಅರ್ಜಿ ಸಲ್ಲಿಸಲು ಐಟಿಗೆ 4 ವಾರಗಳ ಕಾಲಾವಕಾಶ ನೀಡಲಾಗಿದೆ.

2018ರಲ್ಲಿ ಈಗಲ್​ಟನ್ ರೆಸಾರ್ಟ್​ ಮೇಲೆ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆಗಿತ್ತು. ಈ ವೇಳೆ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES