Friday, November 22, 2024

ಟಾಟಾ ಸನ್ಸ್‌ನ ಮಾಜಿ ಚೇರ್ಮನ್ ದುರ್ಮರಣ..!

ಮಂಬೈ : ದೇಶ ಕಂಡ ಪ್ರಖ್ಯಾತ ಉದ್ಯಮಿ ಹಾಗು ಟಾಟಾ ಸಮೂಹದ ಮಾಜಿ ಚೇರ್ಮನ್ ಅಪಘಾತದಲ್ಲಿ ದುರ್ಮರಕ್ಕೀಡಾಗಿದ್ದಾರೆ. ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಮುಂಬೈನಲ್ಲಿ ನಡೆದ ರಸ್ತೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪಾಲ್ಗಾರ್ ಜಿಲ್ಲೆಯ ಚರೋಟಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸೈರಸ್ ಮಿಸ್ತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಚರೋಟಿಯಲ್ಲಿ ರಸ್ತೆ ಡಿವೈಡರ್‌ಗೆ ಬಡಿದು ಕಾರು ಅಪಘಾತಕ್ಕೀಡಾಗಿದೆ. ಸೈರಸ್ ಮಿಸ್ತ್ರಿ ಅಹಮದಾಬಾದ್‌ನಿಂದ ಮುಂಬೈಗೆ ತಮ್ಮ ಮರ್ಸಿಡೀಸ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಿಸ್ತ್ರಿ, ಕಾರಿನ ಚಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಿಸ್ತ್ರಿ ಮತ್ತು ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಉಳಿದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಗುಜರಾತ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈರಸ್‌ ಮಿಸ್ತ್ರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶ್ರೀ ಸೈರಸ್‌ ಮಿಸ್ತ್ರಿ ಅವರ ಅಗಲಿಕೆಯು ಆಘಾತ ತಂದಿದೆ. ಭಾರತದ ಆರ್ಥಿಕತೆಯ ಮುನ್ನಡೆಯ ಬಗ್ಗೆ ನಂಬಿಕೆ ಹೊಂದಿದ್ದ ಭರವಸೆಯ ಉದ್ಯಮಿಯಾಗಿದ್ದರು. ಅವರ ಅಗಲಿಕೆಯು ವಾಣಿಜ್ಯ ಮತ್ತು ಕೈಗಾರಿಕಾ ಜಗತ್ತಿಗೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್‌ ಮಾಡಿದ್ದಾರೆ. ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಲೆ, ಸೈರಸ್ ಮಿಸ್ತ್ರಿ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

2016 ರಲ್ಲಿ ಸೈರಸ್ ಮಿಸ್ತ್ರಿಯವರನ್ನು ಟಾಟಾ ಸನ್ಸ್ ಚೇರ್ಮನ್ ಸ್ಥಾನದಿಂದ ಹೊರಹಾಕಲಾಗಿತ್ತು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಬಹಳ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ನಡೆದಿತ್ತು. 2021 ರಲ್ಲಿ ಸುಪ್ರೀಂಕೋರ್ಟ್ ಸೈರಸ್ ಅವರ ಉಚ್ಚಾಟನೆ ಕಾನೂನುಬದ್ಧವಾಗಿದೆ ಮತ್ತು ಮೈನಾರಿಟಿ ಷೇರುದಾರರ ಹಕ್ಕುಗಳ ಮೇಲಿನ ಟಾಟಾ ಸನ್ಸ್ ನಿಯಮಗಳನ್ನು ಎತ್ತಿಹಿಡಿದಿತ್ತು.

RELATED ARTICLES

Related Articles

TRENDING ARTICLES